ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ ಹಿನ್ನೆಲೆ ಬೆಳ್ಳಾರೆ& ಸುಬ್ರಮಣ್ಯ ಠಾಣೆಗೆ ನೂತನ ಪಿಎಸ್ಐಯನ್ನು ನೇಮಕ ಮಾಡಲಾಗಿದೆ.
ಬೆಳ್ಳಾರೆಯಲ್ಲಿ ಎಸ್ಐ ಆಗಿದ್ದ ರುಕ್ಮ ನಾಯ್ಕ್, ಸುಬ್ರಮಣ್ಯ ಎಸ್ಐ ಆಗಿದ್ದ ಜಂಬೂ ರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಳ್ಯ ಸರ್ಕಲ್ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಮಣ್ಯ ಪೊಲೀಸ್ ಠಾಣೆಗಳಿಗೆ ನೂತನವಾಗಿ ಪೊಲೀಸ್ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ವಿಮ ವಲಯ ಐಜಿಪಿ ದೇವಜ್ಯೋತಿರೇ ಆದೇಶಿಸಿದ್ದಾರೆ.
ಕುಂದಾಪುರ ಎಸ್ಐ ಆಗಿದ್ದ ಸುಹಾಸ್ ಅವರು ಬೆಳ್ಳಾರೆ ಠಾಣೆಗೆ , ವಿಟ್ಲಠಾಣಾ ಎಸ್ಐ ಆಗಿದ್ದ ಮಂಜುನಾಥ್ ಟಿ ಅವರನ್ನು ಸುಬ್ರಮಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೆಳ್ಳಾರೆಯಲ್ಲಿ ಎಸ್ಐ ಆಗಿದ್ದ ರುಕ್ಮಾ ನಾಯಕ್, ಸುಬ್ರಮಣ್ಯ ಎಸ್ಐ ಆಗಿದ್ದ ಜಂಬು ರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.