ದೆಹಲಿ: ಅಂತರರಾಷ್ಟ್ರೀಯ ಹುಲಿ ದಿನ(International Tiger Day)ವನ್ನು ಪ್ರತಿ ವರ್ಷ ಜುಲೈ 29 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಹುಲಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಈ ದಿನವು ಹುಲಿಗಳನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಕಳೆದ 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಸರಿಸುಮಾರು ಶೇ. 95 ರಷ್ಟು ಕಡಿಮೆಯಾಗಿದೆ.
ಅಂತರಾಷ್ಟ್ರೀಯ ಹುಲಿ ದಿನ 2022 ರ ಥೀಮ್
2022 ರ ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಈ ವರ್ಷದ ಥೀಮ್ “ಭಾರತವು ಹುಲಿ ಸಂಖ್ಯೆಯನ್ನು ಪುನರುಜ್ಜೀವನಗೊಳಿಸಲು ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸುತ್ತದೆ(India launches Project Tiger to revive the tiger population)” ಎಂಬುದಾಗಿದೆ.
ಮಹತ್ವ
ಈ ದಿನವು ಹುಲಿಗಳ ಆವಾಸಸ್ಥಾನಗಳನ್ನು ರಕ್ಷಿಸಲು ಮತ್ತು ವಿಸ್ತರಿಸಲು ಪ್ರಯತ್ನಿಸುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್, ಇಂಟರ್ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ಫೇರ್, ಮತ್ತು ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಷನ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸುತ್ತವೆ. WWF ಪ್ರಕಾರ, ಹುಲಿಗಳು ಪ್ರಪಂಚದ 13 ದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಪ್ರಸ್ತುತ ವಿಶ್ವದಲ್ಲಿ ಕೇವಲ 3,900 ಹುಲಿಗಳಿವೆ. ವಿಶ್ವದಲ್ಲಿರುವ ಈಗಿನ ಹುಲಿಗಳ ಪೈಕಿ ಸುಮಾರು ಶೇ. 70 ರಷ್ಟು ಹುಲಿಗಳು ಭಾರತದಲ್ಲಿವೆ.
ಇತಿಹಾಸ
ಕಳೆದ ಶತಮಾನದಲ್ಲಿ ಶೇ. 97 ರಷ್ಟು ಹುಲಿಗಳು ಕಣ್ಮರೆಯಾಗಿದ್ದು, ಈಗ ಕೇವಲ 3,000 ಮಾತ್ರ ಉಳಿದಿವೆ ಎಂದು ಪತ್ತೆಯಾದ ನಂತ್ರ, 2010 ರಲ್ಲಿ ಅಂತರರಾಷ್ಟ್ರೀಯ ಹುಲಿ ದಿನ ಆಚರಿಸುವುದನ್ನು ಪರಿಚಯಿಸಲಾಯಿತು. ಹುಲಿಗಳು ವಿನಾಶದ ಅಂಚಿನಲ್ಲಿರುವುದರಿಂದ, ಪರಿಸ್ಥಿತಿ ಹದಗೆಡುವುದನ್ನು ತಡೆಯಲು ಹಲವಾರು ದೇಶಗಳು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಹುಲಿ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.
BIGG BREAKING NEWS : ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ
Commonwealth Games 2022: ಭಾರತದ ಕ್ರೀಡಾಪಟುಗಳ ಇಂದಿನ ಆಟದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…