ಹಿಮ್ಮತ್ನಗರ(ಗುಜರಾತ್): ʻಜನರು ಏನು ಹೇಳುತ್ತಾರೆಂದು ತಲೆಕೆಡಿಸಿಕೊಳ್ಳುವ ಬದಲು, ತಮ್ಮ ಕೆಲಸವನ್ನು ಮಾಡುತ್ತಲೇ ಇರಬೇಕುʼ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ನಿನ್ನೆ ಗುಜರಾತ್ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್ನಗರ ಪಟ್ಟಣದ ಸಮೀಪವಿರುವ ಸಬರ್ ಡೈರಿಯಲ್ಲಿ ಸುಮಾರು 20 ಮಹಿಳಾ ದನ-ಪಾಲಕರೊಂದಿಗೆ ಸಂವಾದದ ಸಂದರ್ಭದಲ್ಲಿ ಮೋದಿ ಅವರು, “ಜನರು ಏನು ಬೇಕಾದರೂ ಹೇಳಲಿ, ನಾವು ನಮ್ಮ ಕೆಲಸವನ್ನು ಮುಂದುವರಿಸಬೇಕು” ಎಂದು ಹೇಳಿದ್ದಾರೆ.
ಕೆಲವು ಜನರು ತಮ್ಮ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದಾಗ ಅದು ನನಗೆ ಇಷ್ಟವಾಗಲಿಲ್ಲ ಎಂಬ ಮಹಿಳಾ ದನ-ಪಾಲಕರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಮಹಿಳೆ, “ಗುಜರಾತ್ ಇಂದು ನಂಬರ್ ಒನ್ (ರಾಜ್ಯ) ಆಗಿದೆ. ಆದರೆ ಯಾರಾದರೂ ನಿಮ್ಮ ಬಗ್ಗೆ ಅಸಭ್ಯ ಪದಗಳನ್ನು ಬಳಸಿದಾಗ ನಾವು ಇಷ್ಟಪಡುವುದಿಲ್ಲ. 2001 ರ ಭೂಕಂಪದ ನಂತರ ಗುಜರಾತ್ ಅನ್ನು ಮತ್ತೆ ಎದ್ದು ಕಾಣುವಂತೆ ಮಾಡುವ ನಿಮ್ಮ ಹೋರಾಟವನ್ನು ನಾವು ನೋಡಿದ್ದೇವೆ. ಜನರು ನಿಮಗೆ ಹಣೆಪಟ್ಟಿ ಕಟ್ಟಿದ್ದರು. ಆದ್ರೆ, ನೀವು ಜನರ ಸೇವೆ ಮಾಡುತ್ತಲೇ ಇದ್ದೀರಿ” ಎಂದಿದ್ದಕ್ಕೆ ಮೋದಿ ಈ ಹೇಳಿಕೆ ನೀಡಿದ್ದಾರೆ.
BREAKING NEWS : ರಾಜಸ್ಥಾನದಲ್ಲಿ ‘MiG-21 ವಿಮಾನ’ ಪತನ ; ಇಬ್ಬರು ಪೈಲಟ್ʼಗಳು ಸಾವು |MIG Plane Crash