ನವದೆಹಲಿ : ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಚೆಸ್ ಒಲಿಂಪಿಯಾಡ್ -2022ರ 44ನೇ ಋತುವನ್ನ ಗುರುವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, “ಕ್ರೀಡೆಯಲ್ಲಿ, ಸೋತವರು ಯಾರೂ ಇಲ್ಲ, ವಿಜೇತರು ಇದ್ದಾರೆ ಮತ್ತು ಭವಿಷ್ಯದ ವಿಜೇತರು ಇದ್ದಾರೆ” ಎಂದು ಹೇಳಿದರು.
2020ರ ಆನ್ಲೈನ್ ಒಲಿಂಪಿಯಾಡ್ನಲ್ಲಿ ಭಾರತವು ರಷ್ಯಾದೊಂದಿಗೆ ಜಂಟಿ ವಿಜೇತವಾಗಿತ್ತು. ಈ ಬಾರಿ ಚೆಸ್ ಒಲಿಂಪಿಯಾಡ್ನಲ್ಲಿ ಮುಕ್ತ ವಿಭಾಗದಲ್ಲಿ ದಾಖಲೆಯ 187 ದೇಶಗಳ ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 162 ತಂಡಗಳು ಭಾಗವಹಿಸುತ್ತಿವೆ. ಅದೇ ಸಮಯದಲ್ಲಿ, ಪಾಕಿಸ್ತಾನವು 44ನೇ ಚೆಸ್ ಒಲಿಂಪಿಯಾಡ್ನಿಂದ ಹೊರಬಂದಿದೆ. ಇನ್ನು ಪಾಕ್ ತಂಡವು ಭಾರತವನ್ನ ತಲುಪಿರುವ ಸಮಯದಲ್ಲಿ ಪಾಕಿಸ್ತಾನವು ಈ ನಿರ್ಧಾರ ತೆಗೆದುಕೊಂಡಿದೆ.