ಕೆಎನ್ಎನ್ಡಿಜಿಟಲ್ ಡೆಸ್ಕ್ : ಯಾರಿಗೆ ಯಾವಾಗ ಅದೃಷ್ಟ ಒಲಿಯುತ್ತೆ ಅನ್ನೋದನ್ನ ಯಾರೂ ಊಹಿಸಲು ಸಾಧ್ಯವಿಲ್ಲ. ಇದೇ ರೀತಿಯ ಪ್ರಕರಣವೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ. ಇನ್ನು ಈ ಸ್ಟೋರಿ ಓದಿದ್ಮಲೆ ನೀವು ಕೂಡ ಅಬ್ಬಾ.. ನಿಜಕ್ಕೂ ಆತ ಅದೃಷ್ಟವಂತ ಅಂತಾ ಹೇಳ್ತೀರಾ.
ವಾಸ್ತವವಾಗಿ, ಕೇರಳದ ಒಬ್ಬ ವ್ಯಕ್ತಿ ಅಕ್ಷರಶಃ ಸಾಲದ ಸುಳಿಯಲ್ಲಿ ಸಿಲುಕಿದ್ದು, ತಾನಿರುವ ಮನೆಯನ್ನೂ ಮಾರುವುದಕ್ಕೆ ಮುಂದಾಗಿದ್ದಾನೆ. ವಿಷ್ಯ ಏನಪ್ಪಾ ಅಂದ್ರೆ, ಮನೆ ಮಾರಾಟ ಮಾಡುವ ಮೊದ್ಲು, ಆತನಿಗೆ 1 ಕೋಟಿ ರೂ.ಗಳ ಜಾಕ್ಪಾಟ್ ಹೊಡೆದಿದೆ. ಹೌದು, ಕೇರಳದ ವ್ಯಕ್ತಿಯೊಬ್ಬರು ತಮ್ಮ 50 ಲಕ್ಷ ರೂ.ಗಳ ಸಾಲವನ್ನು ಮರುಪಾವತಿಸಲು ತಮ್ಮ ಮನೆಯನ್ನ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ನಂತರ ಇದ್ದಕ್ಕಿದ್ದಂತೆ 1 ಕೋಟಿ ರೂ.ಗಳ ಲಾಟರಿ ಗೆದ್ದಿದ್ದಾರೆ ಎಂದು ಅವರಿಗೆ ತಿಳಿಯಿತು.
ಮಂಜೇಶ್ವರಂನಲ್ಲಿ ಚಿತ್ರಕಲಾವಿದರಾಗಿ ಕೆಲಸ ಮಾಡುತ್ತಿರುವ 50 ವರ್ಷದ ಮೊಹಮ್ಮದ್ ಅಲಿಯಾಸ್ ಬಾವಾ ಕೇರಳ ರಾಜ್ಯ ಲಾಟರಿ ಮೂಲಕ ಜಾಕ್ಪಾಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇರಳದ ಈ ವ್ಯಕ್ತಿ ಸೋಮವಾರ ತನ್ನ 2,000 ಚದರ ಅಡಿ ವಿಸ್ತೀರ್ಣದ ಮನೆಯನ್ನ ಮಾರಾಟ ಮಾಡಲು ಟೋಕನ್ ಮನಿ ಅಡ್ವಾನ್ಸ್ ತೆಗೆದುಕೊಳ್ಳಲು ಹೊರಟಿದ್ದಾಗ, ತಾನು 1 ಕೋಟಿ ರೂಪಾಯಿ ಮೌಲ್ಯದ ಜಾಕ್ಪಾಟ್ ಗೆದ್ದಿರುವುದು ತಿಳಿಯಿತು.
ಮನೆಯನ್ನ ಮಾರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದ ಕಾರಣ ಮೊಹಮ್ಮದ್ ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದ. ತನ್ನ ಹೆಣ್ಣುಮಕ್ಕಳ ಮದುವೆ ಮತ್ತು ಸ್ವಂತ ಮನೆಯನ್ನ ನಿರ್ಮಿಸಿದ ನಂತ್ರ ಮೊಹಮ್ಮದ್ 50 ಲಕ್ಷ ರೂಪಾಯಿ ಸಾಲವಿತ್ತು. ಬ್ಯಾಂಕು ಮತ್ತು ಸಂಬಂಧಿಕರಿಂದ ಸಾಲ ಪಡೆದಿದ್ದರು ಎಂದು ಮಲಯಾಳಂ ಪತ್ರಿಕೆ ವರದಿ ಮಾಡಿದೆ.