ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳದಲ್ಲಿ ಶಾಲಾ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿಯನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಇಡಿ ಬಂಧನದ ಬಳಿಕ ಪಾರ್ಥ ಚಟರ್ಜಿ ಅವ್ರನ್ನ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಏತನ್ಮಧ್ಯೆ, ಇಂದು ಮಮತಾ ಬ್ಯಾನರ್ಜಿ ಸಂಪುಟ ಸಭೆ ಕರೆದಿದ್ದು, ಈ ಸಭೆಯ ನಂತರ ಕೆಲವೇ ದಿನಗಳಲ್ಲಿ ಪಾರ್ಥ ಚಟರ್ಜಿ ಸಚಿವ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಅದ್ರಂತೆ, ಪಾರ್ಥ ಚಟರ್ಜಿ ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಕೈಗಾರಿಕೆಗಳು, ವಾಣಿಜ್ಯ ಮತ್ತು ಉದ್ಯಮಗಳು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವರಾಗಿದ್ದರು.
ಅಂದ್ಹಾಗೆ, ಜುಲೈ 23ರಂದು ಅವರನ್ನ ಕೇಂದ್ರ ಏಜೆನ್ಸಿ ಇಡಿ (ಜಾರಿ ನಿರ್ದೇಶನಾಲಯ) ಬಂಧಿಸಿತ್ತು. ಅರ್ಪಿತಾ ಮುಖರ್ಜಿ ಅವರ ನಿವಾಸದಿಂದ ಸುಮಾರು 21 ಕೋಟಿ ರೂ.ಗಳನ್ನು ಬಂಧಿಸುವ ಮೊದಲು ಏಜೆನ್ಸಿ ವಶಪಡಿಸಿಕೊಂಡಿತ್ತು.
ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಸಮಯದಲ್ಲಿ ಪಾರ್ಥ ಚಟರ್ಜಿ ಶಿಕ್ಷಣ ಇಲಾಖೆಯ ಉಸ್ತುವಾರಿ ವಹಿಸಿದ್ದರು. ನಂತ್ರ ಈ ಇಲಾಖೆಯನ್ನು ಅವರಿಂದ ಸ್ವಾಧೀನಪಡಿಸಿಕೊಳ್ಳಲಾಯಿತು. ಶಾಲಾ ಸೇವಾ ಆಯೋಗವು ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.