ನವದೆಹಲಿ : ಮತದಾನದಲ್ಲಿ ಯುವಕರು ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ತ್ತೇಜಿಸಲು ಚುನಾವಣಾ ಆಯೋಗವು ಮತದಾನ ನೋಂದಣಿಗೆ ಹೊಸ ನಿಯಮವನ್ನು ಪರಿಚಯಿಸಿದೆ. ಇತ್ತೀಚಿನ ನಿಯಮದ ಪ್ರಕಾರ, 17 ವರ್ಷಕ್ಕಿಂತ ಮೇಲ್ಪಟ್ಟವರು 18 ವರ್ಷ ತುಂಬಿದ ನಂತರ ಮತದಾರರಾಗಿ ನೋಂದಾಯಿಸಲು ಮುಂಗಡವಾಗಿ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಸಂಸ್ಥೆ ತಿಳಿಸಿದೆ.
BIGG NEWS : ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಇತ್ತೀಚಿನವರೆಗೂ, ನಿರ್ದಿಷ್ಟ ವರ್ಷದ ಜನವರಿ 1 ರಂದು ಅಥವಾ ಅದಕ್ಕಿಂತ ಮೊದಲು 18 ವರ್ಷ ತುಂಬಿದ ಜನರು ಮತದಾರರ ಪಟ್ಟಿಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು ಅರ್ಹರಾಗಿದ್ದರು. ಜನವರಿ 1 ರ ನಂತರ 18 ವರ್ಷ ತುಂಬುವವರು ಮತದಾರರಾಗಿ ನೋಂದಾಯಿಸಲು ಒಂದು ವರ್ಷ ಪೂರ್ತಿ ಕಾಯಬೇಕಿತ್ತು. ಇದೀಗ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರಂದು 18 ನೇ ವರ್ಷಕ್ಕೆ ಕಾಲಿಟ್ಟ ಯುವಕ- ಯುವತಿಯರು ಮತದಾನಕ್ಕಾಗಿ ಅರ್ಜಿ ಸಲ್ಲಸಬಹುದು.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ನೇತೃತ್ವದ ಚುನಾವಣಾ ಸಮಿತಿಯು 17 ವರ್ಷಕ್ಕಿಂತ ಮೇಲ್ಪಟ್ಟವರಿಗೆ (ಆದರೆ ಇನ್ನೂ 18 ಆಗಿಲ್ಲ) ತಮ್ಮ ಮುಂಗಡ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಕೆಲಸ ಮಾಡುವಂತೆ ರಾಜ್ಯಗಳಿಗೆ ತಿಳಿಸಿದೆ ಎನ್ನಲಾಗುತ್ತಿದೆ.
Good News : ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಇದರ ಜೊತೆಗೆ ಮತದಾರರ ಪಟ್ಟಿಯನ್ನು ಪ್ರತಿ ತ್ರೈಮಾಸಿಕದಲ್ಲಿ ನವೀಕರಿಸಲಾಗುತ್ತದೆ. ಅರ್ಹ ಯುವಕ-ಯುವತಿ 18 ವರ್ಷಗಳ ಅರ್ಹತಾ ವಯಸ್ಸನ್ನು ತಲುಪಿದ ವರ್ಷದ ಮುಂದಿನ ತ್ರೈಮಾಸಿಕದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅದು ಹೇಳಿದೆ.
2023 ರ ಪ್ರಸ್ತುತ ಸುತ್ತಿನ ಮತದಾರರ ಪಟ್ಟಿಯ ವಾರ್ಷಿಕ ಪರಿಷ್ಕರಣೆಗಾಗಿ, 2023 ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ರೊಳಗೆ 18 ವರ್ಷ ವಯಸ್ಸಿನ ಯಾವುದೇ ನಾಗರಿಕರು ಕರಡು ಪ್ರಕಟಣೆಯ ದಿನಾಂಕದಿಂದ ಮತದಾರರಾಗಿ ನೋಂದಣಿಗಾಗಿ ಮುಂಗಡ ಅರ್ಜಿಯನ್ನು ಸಲ್ಲಿಸಬಹುದು ಎಂದಿದ್ದಾರೆ.