ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೀಡಿರುವ ಹೇಳಿಕೆಗೆ ತೀವ್ರ ವಿವಾದ ಉಂಟಾದ ಬೆನ್ನೆಲ್ಲೇ ರಾಷ್ಟ್ರಪತಿಯ ಕ್ಷಮೆಯಾಚಿಸುವುದಾಗಿ ಅಧೀರ್ ರಂಜನ್ ಹೇಳಿದ್ದಾರೆ.
ವಾಸ್ತವವಾಗಿ, ಅಧೀರ್ ರಂಜನ್ ಚೌಧರಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನ ‘ರಾಷ್ಟ್ರೀಯ ಪತ್ನಿ’ ಎಂದು ಕರೆದಿದ್ದರು. ಇದಕ್ಕೆ ಕಾಂಗ್ರೆಸ್ ಮತ್ತು ಅಧೀರ್ ರಂಜನ್ ಚೌಧರಿ ಅವರನ್ನ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಕಾಂಗ್ರೆಸ್ʼನ್ನ ಬುಡಕಟ್ಟು ವಿರೋಧಿ, ಮಹಿಳಾ ವಿರೋಧಿ ಮತ್ತು ಬಡವರ ವಿರೋಧಿ ಎಂದು ಕರೆದಿದ್ದರು. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಕೂಡ ಅವ್ರನ್ನ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅದೇ ಸಮಯದಲ್ಲಿ ಈ ವಿವಾದದ ಕುರಿತು, ಅಧೀರ್ ರಂಜನ್ ಚೌಧರಿ ಬಿಜೆಪಿಯನ್ನ ಗುರಿಯಾಗಿಸಿಕೊಂಡು ಕ್ಷಮೆಯಾಚಿಸಲು ನಾನು ರಾಷ್ಟ್ರಪತಿಯಿಂದ ಸಮಯ ಕೇಳಿದ್ದೇನೆ ಎಂದು ಹೇಳಿದರು. ಆದ್ರೆ, ಬಿಜೆಪಿ ಸೋನಿಯಾ ಗಾಂಧಿಯನ್ನ ಏಕೆ ಟಾರ್ಗೆಟ್ ಮಾಡುತ್ತಿದೆ? ಮುಂದೆ ಬಂದು ನನ್ನ ವಿರುದ್ಧ ಹೋರಾಡಲಿ ಎಂದು ಬಿಜೆಪಿಗೆ ಸವಾಲು ಹಾಕುತ್ತೇನ. ಮಹಿಳೆಯರೇ ಆಗಿರುವ ನಮ್ಮ ನಾಯಕರು ಅವರನ್ನ ಟಾರ್ಗೆಟ್ ಮಾಡುವುದಿಲ್ಲ. ತಪ್ಪು ಮಾಡಿದೆ ಎಂದು ಮತ್ತೊಮ್ಮೆ ಹೇಳುತ್ತಿದ್ದೇನೆ. ನಾನು ಬಂಗಾಳಿಯಾಗಿದ್ದು, ನನ್ನ ಹಿಂದಿ ಚೆನ್ನಾಗಿಲ್ಲ. ನಾನು ಸಂಸತ್ತಿನಲ್ಲಿ ಮಾತನಾಡುತ್ತೇನೆ ಮತ್ತು ವಿವರಿಸುತ್ತೇನೆ. ಮಾತನಾಡುವಾಗ ನನ್ನ ನಾಲಿಗೆ ಜಾರಿತು. ಆದ್ರೆ, ಬಿಜೆಪಿಯವರು ಸಾಸಿವೆಯನ್ನೇ ಬೆಟ್ಟದಷ್ಟು ಮಾಡುತ್ತಿದ್ದಾರೆ” ಎಂದರು.