ನವದೆಹಲಿ : ಕಳೆದ 8 ವರ್ಷಗಳಿಂದ ರೈತರ ವಾರ್ಷಿಕ ಆದಾಯವನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ, ಇದು ಫಲಿತಾಂಶಗಳನ್ನು ತೋರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಗುಜರಾತ್ನ ಸಬರ್ಕಾಂತದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ದೇಶದಲ್ಲಿ 10,000 ರೈತ ಉತ್ಪಾದಕ ಸಂಘಗಳ (FPOs) ರಚನೆಯ ಕಾರ್ಯ ಭರದಿಂದ ಸಾಗುತ್ತಿದೆ. ಈ ಮೂಲಕ, ಸಣ್ಣ ರೈತರು ಆಹಾರ ಸಂಸ್ಕರಣೆ, ಮೌಲ್ಯಾಧಾರಿತ ರಫ್ತು ಮತ್ತು ಪೂರೈಕೆ ಸರಪಳಿಯೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ” ಎಂದರು.
ಅಂದ್ಹಾಗೆ, ಗ್ರಾಮೀಣ ಆರ್ಥಿಕತೆಯನ್ನ ಉತ್ತೇಜಿಸಲು, ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರನ್ನ ಬೆಂಬಲಿಸಲು ಸಬರ್ ಕಾಂತಾದ ಗಧೋಡಾ ಚೌಕಿಯಲ್ಲಿ ಸಬರ್ ಡೈರಿಯ ಅನೇಕ ಯೋಜನೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
Today Sabar Dairy has expanded. New projects worth hundreds of crores are being set up here. Sabar Dairy's capacity will increase further with the addition of milk powder plant with modern technology and one more line in A-septic packing section: PM Modi in Sabarkantha pic.twitter.com/QStZYhLIeb
— ANI (@ANI) July 28, 2022