ಜೈಪುರ: ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ಅಸಂಖ್ಯ ಗ್ರಾಮದ ಬಾಲಕನೊಬ್ಬನ ಪ್ರತಿಭೆ ನೋಡಿ ಬೆರಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಬಾಲಕನ ಕನಸನ್ನು ನನಸಾಗಿಸಲು ಸಹಾಯ ಮಾಡುವಂತೆ ಕೋರಿದ್ದಾರೆ.
ರಾಹುಲ್ ಅವರು ಈ ಕುರಿತ ಟ್ವೀಟ್ಅನ್ನು ಮರುಟ್ವೀಟ್ ಮಾಡಿದ್ದು, ವೀಡಿಯೋದಲ್ಲಿ 16 ವರ್ಷದ ಬಾಲಕ ಭರತ್ ಸಿಂಗ್ ಎಂಬ ಬಾಲಕ ಮೀನುಗಾರಿಕೆಗೆ ಬಳಸುವ ಬಲೆ ಬಳಸಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದನ್ನು ನೋಡಬಹುದು.
हमारे देश के कोने-कोने में अद्भुत प्रतिभा छिपी हुई है, जिसे पहचानना और बढ़ावा देना हमारा कर्तव्य है।@ashokgehlot51 जी से मेरा निवेदन है, इस बच्चे का सपना साकार करने के लिए कृपया उसकी सहायता करें। https://t.co/vlEKd8UkmS
— Rahul Gandhi (@RahulGandhi) July 27, 2022
“ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಅದ್ಭುತ ಪ್ರತಿಭೆ ಅಡಗಿವೆ. ಅವರನ್ನು ಗುರುತಿಸುವುದು ಮತ್ತು ಉತ್ತೇಜಿಸುವುದು ನಮ್ಮ ಕರ್ತವ್ಯವಾಗಿದೆ. ಈ ಬಾಲಕನ ಕನಸು ನನಸು ಮಾಡಲು ಸಹಾಯ ಮಾಡಿ” ಎಂದು ರಾಹುಲ್ ಅವರು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಗೆಹ್ಲೋಟ್, ʻಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಖಂಡಿತವಾಗಿಯೂ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಮತ್ತು ಆತನ ಅಗತ್ಯವನ್ನು ಪೂರೈತ್ತೇನೆʼ ಎಂದು ಟ್ವೀಟ್ ಮಾಡಿದ್ದಾರೆ.
ಮಳೆ ನೀರಿನಿಂದ ಜಲಾವೃತವಾದ ಶಾಲೆ: ವಿದ್ಯಾರ್ಥಿಗಳು ನಿರ್ಮಿಸಿದ ʻಕುರ್ಚಿಗಳ ಸೇತುವೆʼ ಮೇಲೆ ಹಾದುಹೋದ ಶಿಕ್ಷಕಿ ಅಮಾನತು!
Good News : ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ