ಉತ್ತರ ಪ್ರದೇಶ: ವ್ಯಕ್ತಿಯೋರ್ವ ತನ್ನ ಎರಡನೇ ಪತ್ನಿ ಜೊತೆ ಸೇರಿ ಮೊದಲ ಪತ್ನಿ 7 ತಿಂಗಳ ಮಗುವನ್ನು ಕೊಂದು ಶವವನ್ನು ರಹಸ್ಯವಾಗಿ ಹೊಲದಲ್ಲಿ ಹೂತಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದುಬ್ಬಾಗ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮೊದಲ ಪತ್ನಿ ತನ್ನ ಏಳು ತಿಂಗಳ ಮಗಳು ಕಾಣದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಇದರ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಇದೀಗ ಸತ್ಯಾಂಶ ಬಯಲಾಗಿದೆ.
ಆರೋಪಿಗಳಾದ ಸಂಜಯ್ ರಾವತ್ (30) ಮತ್ತು ಆತನ ಎರಡನೇ ಪತ್ನಿ ಮೀನಾ (22) ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯ ಶವವನ್ನು ಹೊರತೆಗೆದ ಬಳಿಕ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದುಬ್ಬಾಗ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಅನಿಲ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
BMRCL: ಮೆಟ್ರೊ ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ನಿಲ್ದಾಣದ ಲಿಫ್ಟ್ ಬಳಸಲು ಟೋಕನ್….!
ಏನಿದು ಪ್ರಕರಣ?
ಪೋಲೀಸರ ಪ್ರಕಾರ, ದೂರುದಾರರಾದ ಪ್ರಮಿಳಾ ಹಾಗೂ ತನ್ನ ಪತಿಯಾದ ಕಾಕೋರಿಯ ಲೋಧೌಸಿ ಗ್ರಾಮದ ನಿವಾಸಿ ಸಂಜಯ್ನೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಹೀಗಾಗಿ, ಪ್ರಮಿಳಾ ತನ್ನ ತವರು ಮನೆಯಲ್ಲಿದ್ದಳು. ಪ್ರಮಿಳಾಳ ಇಬ್ಬರು ಹೆಣ್ಣುಮಕ್ಕಳಾದ ಸೃಷ್ಟಿ, 2, ಮತ್ತು ಮಿಶ್ತಿ(ಏಳು ತಿಂಗಳ ಮಗು) ತಂದೆ ಸಂಜಯ್ ಜೊತೆಯಲ್ಲಿಯೇ ಇದ್ದರು. ಸಂಜಯ್ ಹರ್ದೋಯ್ ರಸ್ತೆಯ ರಾಯ್ಪುರ ಕ್ರಾಸಿಂಗ್ನಲ್ಲಿ ದ್ವಿಚಕ್ರ ವಾಹನ ರಿಪೇರಿ ಅಂಗಡಿ ನಡೆಸುತ್ತಿದ್ದಾರೆ.
ಪ್ರಮಿಳಾಳಿಂದ ದೂರ ಉಳಿದಿದ್ದ ಸಂಜಯ್ ಸುಮಾರು 15 ದಿನಗಳ ಹಿಂದೆ ಮೀನಾ ಎಂಬ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿ ಆಕೆಯೊಂದಿಗೆ ವಾಸಿಸಲು ಆರಂಭಿಸಿದ್ದ.
ಇದಾದ ನಂತ್ರ, ಪ್ರಮೀಳಾಳ ಇಬ್ಬರು ಮಕ್ಕಳು ಕಾಣಿಸುತ್ತಿರಲಿಲ್ಲ. ಇದ್ರಿಂದ ಅನುಮಾನಗೊಂಡು ನೆರೆಹೊರೆಯವರನ್ನು ವಿಚಾರಿಸಿದಾಗ ವಿಷಯ ಬಯಲಾಗಿದೆ. ಎರಡು ದಿನಗಳ ಹಿಂದೆ ತನ್ನ ಕಿರಿಯ ಮಗಳು ಸಾವನ್ನಪ್ಪಿದ್ದಾಳೆ ಮತ್ತು ಆಕೆಯ ಶವವನ್ನು ಹತ್ತಿರದ ಹೊಲದಲ್ಲಿ ರಹಸ್ಯವಾಗಿ ಹೂಳಲಾಗಿದೆ ಎಂದು ಪ್ರಮಿಳಾ ದುಬ್ಬಾಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿ ರಹಸ್ಯವಾಗಿ ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದ್ದರಿಂದ ಆಕೆಯ ದೂರಿನ ಮೇರೆಗೆ ಪೊಲೀಸರು ಕ್ರಮಕೈಗೊಂಡಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.