ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಿಂದೂ ಪುರಾಣದಲ್ಲಿ ಅನೇಕ ವ್ರತಚಾರಣೆ ಕುರಿತು ಉಲ್ಲೇಖವಿದೆ.ಈ ವ್ರತಚರಣೆಗಳು ತಮ್ಮ ಮನೋಇಷ್ಟರ್ಥವನ್ನು ಸಿದ್ದಿಸಿಕೊಳ್ಳುವ ಒಂದು ಸುಲಭವಾದ ಮಾರ್ಗವಾಗಿದೆ.ಪ್ರತಿಯೊಂದು ವ್ರತ ಆಚರಣೆಯು ತನ್ನದೇ ಆದ ಪದ್ಧತಿಗಳು ಆಚರಣೆ ಹಾಗೂ ಕಥೆ, ಉಪಕಥೆ ಹೀಗೆ ಕಾಣಬಹುದು.ಇಂತಹ ವ್ರತ ಆಚರಣೆಗಳಲ್ಲಿ ಅತ್ಯಂತ ಶ್ರೇಷ್ಠವದಂತಹ ಹಾಗೂ ಮಹತ್ವದಂತಹ ವ್ರತ ಎಂದರೆ ಶ್ರೀ ವರಮಹಾಲಕ್ಷ್ಮಿ ವ್ರತ.
ಅಷ್ಟ ಐಶ್ವರ್ಯ ದೇವತೆಯಾದ ಲಕ್ಷ್ಮಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವಂತಹ ವ್ರತವೇ ಶ್ರೀ ವರಮಹಾಲಕ್ಷ್ಮಿ ವ್ರತ. ನಿತ್ಯ ಶುದ್ಧಳು,ನಿತ್ಯ ಸಿದ್ದಳು ಆಗಿರುವ ಲಕ್ಷ್ಮಿಯನ್ನು ಕ್ಷೀರ ಸಮುದ್ರ ಸಂಭವೆ ಸಮುದ್ರ ರಾಜನ ಪುತ್ರಿ ಚಂದ್ರನ ತಂಗಿ ಯಜ್ಞಕುಂಡದಲ್ಲಿ ಉದ್ಭವ ಆದವಳು ಕಮಲದಲ್ಲಿ ಅವಿರ್ಬವಿಸಿದವಳು ಎಂದು ಹೇಳುವುದನ್ನು ಕಾಣುತ್ತೆವೆ.ಆದರೆ ಈ ಲಕ್ಷ್ಮೀಯು ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು ಮತ್ತು ಮಂಗಳ ಸ್ವರೂಪಿಣಿ ಮತ್ತು ಸಂಪತ್ತು ಸ್ವರೂಪಿಣಿ ಎಂದು ಹೇಳುತ್ತಾರೆ.
ಜ್ಞಾನ,ಐಶ್ವರ್ಯ, ಸುಖ,ಆರೋಗ್ಯ, ಧನ, ಧಾನ್ಯ, ಜಯ ವಿಜಯಗಳನ್ನು ಲಕ್ಷ್ಮಿಯ ಲಕ್ಷಣಗಳು ಎಂದು ಕರೆಯಲಾಗುತ್ತದೆ.ಈ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದರೆ ಅಷ್ಟ ಐಶ್ವರ್ಯಗಳು ಸಹ ಪ್ರಾಪ್ತಿ ಆಗುತ್ತವೆ. ವರಮಹಾಲಕ್ಷ್ಮಿ ಕಥೆಯನ್ನು ಕೇಳುವುದು ಮತ್ತು ಹೇಳುವುದು ಅತ್ಯಂತ ಪುಣ್ಯದಾಯಕ ಆದಂತಹ ಕಾರ್ಯವಾಗಿದೆ.ದೇವಿ ಪಾರ್ವತಿ ಮೆಚ್ಚಿದಂತಹ ಈ ವರಮಹಾಲಕ್ಷ್ಮಿ ವ್ರತದ ಕಥೆಯನ್ನು ಭಕ್ತಿ ಪೂರ್ವಕವಾಗಿ ಓದಿ ತಿಳಿದುಕೊಳ್ಳಿ.
ವರಮಹಾಲಕ್ಷ್ಮಿ ಕಥೆ : ಪೂರ್ವ ಕಾಲದಲ್ಲಿ ಸತ್ಯ ಲೋಕ ವಾಸಿಗಳಾದ ಋಷಿ ಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತ ಮಹರ್ಷಿಯನ್ನು ಕುರಿತು ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ ನೀವು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ ಲೋಕದಲ್ಲಿ ಸರ್ವ ಸೌಭಾಗ್ಯವನ್ನು ಕೊಡುವ ಉತ್ತಮವಾದ ವ್ರತ ಹೇಳಿ ಎಂದು ಕೇಳಿಕೊಂಡರು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಋಷಿ ಶ್ರೇಷ್ಠರ ಮಾತನ್ನು ಮೆಚ್ಚಿದ ಸೂತ ಮಹಾಮುನಿಗಳು ಕಥೆಯೊಂದನ್ನು ಹೇಳಿದರು.ಋಷಿ ಶ್ರೇಷ್ಠರೆ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತ ಇದೆ. ಕೈಲಾಸ ಪರ್ವತವು ದೇವ ನದಿಗಳಿಂದ ಪೂರ್ಣವಾಗಿ ಫಲ ಭರಿತವಾದ ನಾನ ಬಗೆಯ ವೃಕ್ಷ ಸಮೂಹದಿಂದ ಕಾಮಧೇನು ಕಲ್ಪವೃಕ್ಷ ಸೇರಿದಂತೆ ಸಕಲ ಸುಖಗಳಿಗೂ ವಾಸಸ್ಥಾನ ಆಗಿರುವುದು. ಆದಕಾರಣ ಯಕ್ಷ ರಾಕ್ಷಸ,ಗರುಡ ಗಂಧರ್ವ, ದೇವಮನುಷ್ಯದಿಗಳು ತಮ್ಮ ಪೂರ್ವಪುಣ್ಯ ಅನುಸಾರ ಸೇರಿ ಅಲ್ಲಿಗೆ ಒಡೆಯನದ ಪಾರ್ವತಿಶ್ವರನಿಗೆ ಸೇವೆ ಸಲ್ಲಿಸುತ್ತಿದ್ದರು.
ಒಂದಾನೊಂದು ಕಾಲದಲ್ಲಿ ಪರಮೇಶ್ವರನು ಪಾರ್ವತಿಯೊಡನೆ ಸಂತೋಷದಿಂದ ಕುಳಿತಿರುವಾಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು ಮಹಾದೇವ ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು ಎಂದು ಕೇಳಿದರು.
ಆಗ ಪರಮೇಶ್ವರನು ಸರ್ವ ಸಂಪತ್ತುಪ್ರದಾವಾದ ಪುತ್ರಬೌದಾಯಕವಾದ ಸಂಮಂಗಳ ಸಂತಾನಕರವಾದ ವರಮಹಾಲಕ್ಷ್ಮಿ ವ್ರತ ಇದೆ.ಈ ವ್ರತವನ್ನು ಭಕ್ತಿಯಿಂದ ಹೆಂಗಸರು, ಗಂಡಸರು, ಮಕ್ಕಳಾಗಲಿ ಮಾಡಬಹುದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು ಎಂದು ಹೇಳಿದರು.ಪಾರ್ವತಿಯು ವರಮಹಾಲಕ್ಷ್ಮಿ ವ್ರತದ ನಿಯಮ ಏನು ಅದನ್ನು ಹೇಗೆ ಮಾಡುವುದು ಎಂದು ಕೇಳಿದರು.
ನಿಯಮಗಳು : ಈ ವ್ರತಕ್ಕೆ ಆದಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣ ಮಾಸದಲ್ಲಿ ಪೌರ್ಣಮಿ ಸಮೀಪದ ಬೃಹವಾರದಲ್ಲಿ ಮಾಡಬೇಕು.ಈ ವ್ರತವನ್ನು ಶ್ರೇದೆ ಭಕ್ತಿಯಿಂದ ಮಾಡಿದ ಭಕ್ತರ ಕೋರಿಕೆ ಕೈಗೂಡಿ ಕಷ್ಟ ಕಾರ್ಪನ್ಯಾಗಳು ನಾಶವಾಗುವುದು.ಈ ವಿಷಯದಲ್ಲಿ ಒಂದು ಪ್ರಸಿದ್ಧವಾದ ಕಥೆ ಇದೆ.
ವರಮಹಾಲಕ್ಷ್ಮಿ ಕಥೆ :ವಿಗರ್ಭ ದೇಶಕ್ಕೆ ರಾಜಧಾನಿಯಾದ ಕುಂಡಿನ ನಗರದಲ್ಲಿ ಚಾರುಮತಿ ಎಂಬ ಸ್ತ್ರೀ ಇದ್ದಳು.ಈ ಚಾರುಮತಿ ದರಿದ್ರಳಾದರು ಸಂಪನ್ನಳು ಪತಿ ಸೇವೆ ಮುಖ್ಯವೆಂದು ಸದಾ ಸಂತೋಷ ಚಿತ್ತಾಳಾಗಿ ಪತಿಯ ಮನಸ್ಸನ್ನು ನೋಯಿಸದೆ ಇದ್ದಳು.ಇವಳನ್ನು ಮೆಚ್ಚಿದ ಮಹಾಲಕ್ಷ್ಮಿಯು ಒಂದು ದಿನ ಚಾರುಮತಿ ಮಲಗಿದಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳುತ್ತಾಳೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪತಿ ವ್ರತೆಯಾದ ಚಾರುಮಾತಿಯೇ ನಿನ್ನ ಗುಣಶಿಲಾಗಳಿಗೆ ಮೆಚ್ಚಿ ನಿನ್ನ ಪೂರ್ಣ ಪುಣ್ಯ ಅನುಸರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಆದ್ದರಿಂದ ನಿನಗೆ ದಾರಿದ್ರ ನಾಶವಾಗಿ ಅಷ್ಟ ಐಶ್ವರ್ಯವು ಪ್ರಾಪ್ತಿಯಾಗುತ್ತದೆ.ಯಾರು ನನ್ನನ್ನು ಶ್ರಾವಣ ಮಾಸದ ದಿನ ಎರಡೇ ಶುಕ್ರವಾರದ ದಿನ ಪ್ರದೋಷಕ್ಕೆ ಸಮಯಕ್ಕೆ ಸರಿಯಾಗಿ ವಿಧಿವತ್ತಗಿ ನನ್ನನ್ನು ಪೂಜೆ ಮಾಡಿದರೆ ನಾನು ಅವರಿಗೆ ಸಕಲ ಬೊಗ ಭಾಗ್ಯಗಳನ್ನು ಕೊಡುವೆನು.
ಯಾರಿಗೆ ಪುಣ್ಯ ಸಂಪರ್ಕ ಇರುವುದು ಅಂತವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ. ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೊ ಅವರೆ ದನ್ಯರು, ಶೂರರು, ಪುಣ್ಯರು,ಮಹಾತ್ಮರು, ಸಾಹಸಿಗಳು, ಪಂಡಿತರು ಮತ್ತು ಸರ್ವೋತ್ತಮರು. ಈ ವ್ರತವನ್ನು ಮಾಡಿ ಧನ್ಯಳಾಗು. ನಿದ್ರೆಯಲ್ಲಿ ಉಪದೇಶಿಸಿ ಮಹಾಲಕ್ಷ್ಮಿ ಕಣ್ಮರೆಯದರು. ಆಗ ಚಾರುಮತಿಯು ನಿದ್ರೆಯಿಂದ ಎದ್ದು ತನ್ನ ಕನಸಿನಲ್ಲಿ ನಡೆದ ಸಂಗತಿಯನ್ನು ತನ್ನ ಮನೆಯವರಿಗೆಲ್ಲ ತಿಳಿಸುವುದಕ್ಕೋಸ್ಕರ ಬೆಳಗಾಗುವ ವರೆಗೂ ನಿದ್ರೆಯನ್ನು ಬಿಟ್ಟು ಕಾಯುತ್ತ ಕುಳಿತಳು.
ಬೆಳಗಾದಗಾ ಮನೆಯವರಿಗೆ ಸ್ವಪ್ನ ವ್ರತವನ್ನು ತಿಳಿಸಿದಳು. ಇದನ್ನು ತಿಳಿದ ಮನೆಯವರು ಸಹ ಆ ಮಹಾಲಕ್ಷ್ಮಿ ನಿನ್ನ ಕನಸಿನಲ್ಲಿ ಬಂದು ಈ ವಿಷಯವನ್ನು ತಿಳಿಸಿದಾಗ ನೀನು ಖಂಡಿತ ಈ ವ್ರತವನ್ನು ಮಾಡಲೇಬೇಕು ಎಂದು ಆಕೆಯನ್ನು ಪ್ರೋತ್ಸಾಹಿಸಿದರು. ಚಾರುಮತಿ ಮತ್ತು ಕುಂಡಿನ ನಗರದ ಅನೇಕ ಮಹಿಳೆಯರು ಈ ಶ್ರಾವಣ ಮಾಸದ ಎರಡನೇ ಶುಕ್ರವಾರ ಎಂದು ಬರುವುದು ಎಂದು ಕಾಯುತ್ತ ಕುಳಿತರು. ದಿನಕಳೆದ ಹಾಗೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಬಂದಿತು. ಚಾರುಮತಿ ಮತ್ತು ಕುಂಡಿನ ನಗರದ ಅನೇಕ ಮಹಿಳೆಯರು ಪೂಜೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡರು.
ಚಾರುಮತಿಯು ಭಕ್ತಿಯಿಂದ ಶ್ರದ್ಧೆಯಿಂದ ನಿಯಮದಂತೆ ವ್ರತವನ್ನು ಆಚರಿಸಿದಳು. ನಿಯಮಾನುಸಾರ ವರಮಹಾಲಕ್ಷ್ಮಿ ವ್ರತ ಆಚರಣೆ ಮಾಡಿದ ಚಾರುಮತಿಗೆ ವರಮಹಾಲಕ್ಷ್ಮಿ ಕಟಾಕ್ಷದಿಂದ ಅಷ್ಟ ಐಶ್ವರ್ಯ ಪ್ರಾಪ್ತಿಯಾದವು. ಚಾರುಮತಿ ಬಡವರಿಗೆ ಅನ್ನದಾನ ಮಾಡಿ ಹಾಗೆ ತನಗೆ ತಿಳಿದವರಿಗೆಲ್ಲ ಈ ವರಮಹಾಲಕ್ಷ್ಮಿ ವ್ರತಚರಣೆ ಬಗ್ಗೆ ತಿಳಿಸುತ್ತಾ ಸುಖವನ್ನು ಅನುಭವಿಸುತ್ತ ಭೂಲೋಕದಲ್ಲಿ ಅನಂತವಾದ ಅಪಾರ ಸೌಖ್ಯವನ್ನು ಅನುಭವಿಸಿ ಪರಲೋಕದಲ್ಲಿ ಶ್ರೇಷ್ಠವಾದ ಪತಿವ್ರತೆ ಸಾಯುಜ್ಯವನ್ನು ಪಡೆದಳು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಆದ್ದರಿಂದ ಈ ಲೋಕದಲ್ಲಿ ಯಾರು ಭಕ್ತಿ ಭಾವದಿಂದ ಈ ವ್ರತವನ್ನು ಆಚರಿಸುವವರು ಅಂತವರು ಅಖಂಡವಾದ ಐಶ್ವರ್ಯವನ್ನು ಪಡೆದು ವರಮಹಾಲಕ್ಷ್ಮಿಯ ಪ್ರಸಾದದಿಂದ ಬೊಗ ಭಾಗ್ಯವನ್ನು ಅನುಭವಿಸುವವರು ಎಂದು ಹೇಳಿ ಪರಮೇಶ್ವರನು ಕಥೆಯನ್ನು ಮುಗಿಸಿದರು. ಕಥೆ ಕೇಳಿದ ಪಾರ್ವತಿಯು ಮಹಾದೇವ ನನ್ನಲ್ಲಿ ನಿಮಗೆ ದಯೇ ಉಂಟಾದರೆ ಈ ವಿದಾನವನ್ನು ವಿವರವಾಗಿ ಹೇಳಬೇಕು ಎಂದು ಕೇಳಿಕೊಂಡರು.
ಆಗ ಪರಮೇಶ್ವರನು ಪೂಜಾವಿಧಾನಗಳನ್ನು ಹೀಗೆ ವಿವರಿಸಿದರು..ವ್ರತದ ಪೂಜಾ ವಿಧಾನ : ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನ ಭಕ್ತಿಯಿಂದ ಗಂಡಸರು ಅಥವಾ ಹೆಂಗಸರು ಮಂಗಳ ಸ್ನಾನವನ್ನು ಮಾಡಿಕೊಂಡ ನಂತರ ಶುಭ ವಸ್ತ್ರಗಳನ್ನು ಧರಿಸಬೇಕು.ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋವಾರವಾದ ಮಂಟಪವನ್ನು ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚ ವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ ಅದರ ಮೇಲೆ ಮಾವಿನ ಚಿಗುರಿನಿಂದ ಕೂಡಿದ ಕಳಸವನ್ನು ಇಟ್ಟು ಪ್ರಾಣ ಪ್ರತಿಷ್ಠಾಪನೆ ಮಾಡಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು.
ಮಂತ್ರಗಳಿಂದ ದೇವಿಯನ್ನು ತೃಪ್ತಿಪಡಿಸಿ ಯೋಗ್ಯನಾದ ಬ್ರಾಹ್ಮಣಗೆ ಉಪಾಯ ಧನವನ್ನು ಕೊಡಬೇಕು. ಬ್ರಾಹ್ಮಣರ ಸುವಾಸಿನಿಯರಿಗೆ ಭೋಜನ ದಕ್ಷಿಣೆಯನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು ಎಂದು ಪರಮೇಶ್ವರನು ವಿವರಿಸಿದನು. ಸೂತರು ಪುರಾಣಿಕರು ಋಷಿಗಳಿಗೆ ಹೇಳಿದರು. ಈ ಕಥೆಯನ್ನು ಕೇಳಿದ ಋಷಿಮುನಿಗಳು ಸಂತೋಷಭರಿತರಾದರು. ಈ ವರಮಹಾಲಕ್ಷ್ಮಿ ವ್ರತವನ್ನು ಯಾರು ಮಾಡುವರು ಹಾಗೂ ಈ ಕಥೆಯನ್ನು ಯಾರು ಕೇಳುವರು ಅವರಿಗೆ ದಾರಿದ್ರ ದುಃಖ ನಾಶವಾಗಿ ಸಂಪತ್ತಿನಿಂದ ಸಕಲ ಭಾಗ್ಯಗಳು ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ.ಈ ಕಥೆಯನ್ನು ಹೇಳುವವರಿಗೂ ಮತ್ತು ಕೇಳುವವರಿಗೂ ಸಕಲ ಪುಣ್ಯ ಪ್ರಾಪ್ತಿ ಆಗುತ್ತದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559