ನವದೆಹಲಿ: ಕೇಂದ್ರ ಸರ್ಕಾರದಿಂದ ಇಂದು ಲೋಕಸಭೆಯಲ್ಲಿ ಮಹತ್ವದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ 2021 ( National Anti-Doping Bill 2021 ) ಅನ್ನು ಮಂಡಿಸಲಾಗಿತ್ತು. ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಈ ಮಸೂದೆ ಮಂಡನೆಯ ವೇಳೆಯಲ್ಲಿ ಮಾತನಾಡಿದಂತ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ( Union Sports Minister Anurag Thakur ) ಅವರು, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆಯು ಭಾರತದ ಖ್ಯಾತಿಯನ್ನು ಹೆಚ್ಚಿಸುತ್ತದೆ. ದೇಶವು ವಿಶೇಷ ಕಾನೂನುಗಳು ಮತ್ತು ಡೋಪಿಂಗ್ ವಿರೋಧಿ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರುತ್ತದೆ. ನಾವು ಡೋಪಿಂಗ್ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಡೋಪಿಂಗ್ನ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
The National Anti-Doping Bill, 2021 gets passed in Lok Sabha.
— ANI (@ANI) July 27, 2022
National Anti-Doping Bill will boost India's reputation. The country will have special laws and anti-doping testing facilities. We need to widen the scope of doping investigations and increase the testing capacity of doping: Union Sports Minister Anurag Thakur pic.twitter.com/zUFl2Q6CDk
— ANI (@ANI) July 27, 2022