ಚೆನ್ನೈ: ತಮಿಳುನಾಡಿನಲ್ಲಿ ನಿರಂತರವಾಗಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ. ಇಂದು 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ವಾರಗಳಲ್ಲಿ ರಾಜ್ಯದಲ್ಲಿ ಐದನೇ ಪ್ರಕರಣ ನಡೆದಿದೆ.
BREAKING NEWS : ತಿಹಾರ್ ಜೈಲಿನಲ್ಲಿ ಉಪವಾಸ ಕೂತಿದ್ದ ಭಯೋತ್ಪಾದಕ ‘ಯಾಸಿನ್ ಮಲಿಕ್’ ಆಸ್ಪತ್ರೆಗೆ ದಾಖಲು
ಶಿವಗಂಗಾ ಜಿಲ್ಲೆಯ ಮನೆಯಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಗಣಿತ ಮತ್ತು ಜೀವಶಾಸ್ತ್ರದ ವಿಷಯಗಳು ತನಗೆ ಕಷ್ಟವಾಗುತ್ತಿದೆ ಎಂದು ಸೂಸೈಡ್ ನೋಟ್ ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೊದಲು ನಾಲ್ವರು ಶಾಲಾ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ನೇ ತರಗತಿಯಲ್ಲಿ ಮೂವರು ಮತ್ತು 11 ನೇ ತರಗತಿಯಲ್ಲಿ ಒಬ್ಬರು ವಿವಿಧ ಕಾರಣಗಳಿಂದ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ ಶಿವಕಾಶಿಯಲ್ಲಿ 11ನೇ ತರಗತಿಯ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ರಾಜಜ್ಯದಲ್ಲಿ ಸತತ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು, ಸಿಎಂ ಸ್ಟಾಲಿನ್ ಅವರು ಯುವಜನತೆ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
BIGG NEWS : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ