ಮಡಿಕೇರಿ: ಕಳೆದ ವಾರದ ಸುರಿದ ಭಾರಿ ಮಳೆಗೆ ಇಡೀ ರಾಜ್ಯವೇ ನಲುಗಿಹೋಗಿತ್ತು. ಭಾರೀ ಮಳೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆಯಲ್ಲಿ ಉಬ್ಬು ಕಂಡು ಬಂದಿದ್ದರಿಂದ ತಾತ್ಕಾಲಿಕವಾಗಿ ನಿಷೇಧಿಸಿದ್ದ ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದಿನಿಂದ ಕೊಡಗು ಜಿಲ್ಲಾಡಳಿತ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
BIGG NEWS: ಬ್ಯಾಟರಾಯಪುರ ಪೊಲೀಸರ ಬೇಟೆ: ಅಕ್ರಮವಾಗಿ ಶ್ರೀಗಂಧ ಮಾರುತ್ತಿದ್ದ ಐದು ಜನರ ಬಂಧನ
ಮಳೆಯಿಂದಾಗಿ ಮಡಿಕೇರಿ- ಮಂಗಳೂರು ರಸ್ತೆ ಕುಸಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಸಂಪರ್ಕವನ್ನು ನಿಷೇಧ ಮಾಡಲಾಯಿತು. ಅಲ್ಲದೆ ತಡೆಗೋಡೆಯ ಉಬ್ಬುವಿಕೆಯನ್ನು ತಡೆಯಲು ತಾತ್ಕಾಲಿಕವಾಗಿ ಸ್ಯಾಂಡ್ ಬಂಡಲ್ಗಳನ್ನು ಹಾಕಿ ಕಾಮಗಾರಿಯನ್ನು ಮಾಡಲಾಗಿತ್ತು.