ಶಿವಮೊಗ್ಗ: ಹಿಂದೂ ಕಾರ್ಯಕರ್ತ ಪ್ರವೀಣ್ ಬರ್ಬರ ಹತ್ಯೆ ಖಂಡಿಸಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದ ಯಾವುದೇ ತಪ್ಪು ಮಾಡದ ಹಿಂದುತ್ವವಾದಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ
ಯಾವುದೇ ತಪ್ಪು ಮಾಡದ ಹಿಂದುತ್ವವಾದಿ ಟಾರ್ಗೆಟ್ ಮಾಡಲಾಗುತ್ತಿದೆ. ಕೆಲವು ಮುಸಲ್ಮಾನ ಗೊಂಡಾಗಳು ಕಗ್ಗೊಲೆ, ಹಲ್ಲೆ ಮಾಡುತ್ತಿದ್ದಾರೆ. ಒಂಟಿಯಾಗಿರುವ ವೇಳೆ ಕೊಲೆ ಮಾಡುತ್ತಿರುವ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ. ಮಂಗಳೂರಿನಲ್ಲಾದ ಕೊಲೆಯನ್ನು ನಾನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತಾನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳು ಈ ಕೃತ್ಯವನ್ನು ಖಂಡಿಸಬೇಕು. ಯಾರು ಬೆಂಬಲ ಕೊಡಬಾರದು. ಈಗಾಗಲೇ ಸಿಎಂ ಹಾಗೂ ಗೃಹ ಸಚಿವರು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಸರ್ಕಾರ ಹಾಗೂ ಹಿಂದೂ ಸಮಾಜ ಬಲಹೀನ ಯಾರು ಅಂದುಕೊಳ್ಳುವುದು ಬೇಡ. ಇದು ಹಿಂದೂತ್ವವಾದಿಗಳ ದೌರ್ಬಲ್ಯವೂ ಅಲ್ಲ. ಕಾನೂನಿಗೆ ಗೌರವ ಕೊಟ್ಟು, ಶಾಂತಿ ಸುವ್ಯವಸ್ಥೆ ಕಾಪಾಡಲೂ ಎಲ್ಲರೂ ಸುಮ್ಮನಿದ್ದಾರೆ ಎಂದರು.
ನಾನು ಕೂಡ ನಾಳೆ ಸಿಎಂ ಭೇಟಿಯಾಗಿ, ಇಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಮಾಡುತ್ತೇನೆ ಎಂದರು.