ನವದೆಹಲಿ: ರಾಮ್ನಾಥ್ ಕೋವಿಂದ್(Ram Nath Kovind) ಅವರು ದೇಶದ ರಾಷ್ಟ್ರಪತಿ ಹುದ್ದೆಯನ್ನು ತ್ಯಜಿಸುವ ಒಂದು ದಿನದ ಮೊದಲು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರಿಂದ ಒಂದು ಪತ್ರ(Letter)ವನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಕೋವಿಂದ್ ಅವರು ತನ್ನ ಅಧಿಕಾರಾವಧಿಯಲ್ಲಿ ಹೊಂದಿದ್ದ ನಿಷ್ಠೆ, ಕಾರ್ಯಕ್ಷಮತೆ, ಸೂಕ್ಷ್ಮತೆ ಮತ್ತು ಸೇವೆಯ ಉನ್ನತ ಗುಣಮಟ್ಟವನ್ನು ಮೋದಿ ಅವರು ಶ್ಲಾಘಿಸಿದ್ದಾರೆ.
ಮಾಜಿ ರಾಷ್ಟ್ರಪತಿಗಳು ಇಂದು ಟ್ವಿಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. “ಪ್ರಧಾನಿ ಮೋದಿ ಅವರ ಈ ಪತ್ರವು ನನ್ನನ್ನು ಆಳವಾಗಿ ಸ್ಪರ್ಶಿಸಿದೆ. ಅವರ ದಯೆ ಮತ್ತು ಹೃತ್ಪೂರ್ವಕ ಮಾತುಗಳು ನಾಗರಿಕರು ನನ್ನ ಮೇಲೆ ತೋರಿದ ಪ್ರೀತಿ ಮತ್ತು ಗೌರವದ ಪ್ರತಿಬಿಂಬ ಎಂದು ನಾನು ಭಾವಿಸಿದ್ದೇನೆ. ನಾನು ನಿಮಗೆಲ್ಲರಿಗೂ ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ” ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.
This letter from Prime Minister @narendramodi has deeply touched me. I take his kind and heartfelt words as a reflection of love and respect fellow citizens have showered on me. I am sincerely grateful to you all. pic.twitter.com/8GBBMnwvYf
— Ram Nath Kovind (@ramnathkovind) July 26, 2022
ಮಾಜಿ ರಾಷ್ಟ್ರಪತಿಗಳು ಟ್ವಿಟರ್ನಲ್ಲಿ ಮೋದಿ ಅವರು ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ನಿಮ್ಮ ಅಧಿಕಾರಾವಧಿಯು ಅಂತ್ಯಗೊಳ್ಳುತ್ತಿದೆ. ನಾನು ಇಡೀ ರಾಷ್ಟ್ರದ ಪರವಾಗಿ ನಿಮಗೆ ಧನ್ಯವಾದ ಹಾಗೂ ನಿಮ್ಮ ಅತ್ಯುತ್ತಮ ಸೇವೆಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.
ಉತ್ತರ ಪ್ರದೇಶದ ಸಣ್ಣ ಹಳ್ಳಿಯಿಂದ ರಾಷ್ಟ್ರಪತಿ ಭವನದವರೆಗೆ ಬಂದ ಕೋವಿಂದ್ ಅವರ ಪ್ರಯಾಣಕ್ಕೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಇದು ನಮ್ಮ ದೇಶದ ವಿಕಾಸ ಮತ್ತು ಅಭಿವೃದ್ಧಿಗೆ ಒಂದು ನೀತಿಕಥೆ ಮತ್ತು ನಮ್ಮ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದು ಶ್ಲಾಘಿಸಿದ್ದಾರೆ.