ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರು ಇಂದು ಎರಡನೇ ಸುತ್ತಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಹಾಜರಾಗುವ ನಿರೀಕ್ಷೆಯಿದೆ.
ಜುಲೈ 21 ರಂದು ಮೊದಲ ಬಾರಿಗೆ ವಿಚಾರಣೆಗಾಗಿ ಹಾಜರಾಗಿದ್ದ ಸೋನಿಯಾ ಗಾಂಧಿಗೆ ಇಡಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಈ ವೇಳೆ ಸೋನಿಯಾ ಅವರಿಗೆ ಒಟ್ಟು 28 ಪ್ರಶ್ನೆಗಳನ್ನು ಕೇಳಿದ್ದರು.
ಕೋವಿಡ್ ಹಿನ್ನೆಲೆ, ಇಂದು ನಡೆಸಲಾಗುವ ವಿಚಾರಣೆಯ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುವುದು. ಸೋನಿಯಾ ಹಾಗೂ ತನಿಖಾಧಿಕಾರಿಗಳ ನಡುವೆ ದೈಹಿಕ ಅಂತರವನ್ನು ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿದ್ದಾರೆ.
ಸೋನಿಯಾ ಗಾಂಧಿ ಅವರ ಮಕ್ಕಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರು ಕಳೆದ ವಾರದಂತೆ ಮತ್ತೆ ಇಡಿ ಕಚೇರಿಗೆ ಅವರೊಂದಿಗೆ ಬರುವ ನಿರೀಕ್ಷೆಯಿದೆ.
ಈ ವೇಳೆ ದೆಹಲಿ ಪೊಲೀಸರು ಸಿಆರ್ಪಿಎಫ್ ಮತ್ತು ಆರ್ಎಎಫ್ ಸಿಬ್ಬಂದಿ ಸೇರಿದಂತೆ ಬೃಹತ್ ಪಡೆಗಳನ್ನು ನಿಯೋಜಿಸುವ ನಿರೀಕ್ಷೆಯಿದೆ. ಸೋನಿಯಾ ಅವರ ನಿವಾಸ ಮತ್ತು ಇಡಿ ಕಚೇರಿ ನಡುವಿನ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಂಪೂರ್ಣ ಬ್ಯಾರಿಕೇಡ್ ಹಾಕುವ ನಿರೀಕ್ಷೆಯಿದೆ.
ಭಾರಿ ಮಳೆಗೆ ಸ್ಮಶಾನ ಜಲಾವೃತ: ರಸ್ತೆ ಬದಿಯಲ್ಲೇ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಿದ ಕುಟುಂಬಸ್ಥರು… ವಿಡಿಯೋ
ಫೋನ್ನಲ್ಲಿ ಮಾತನಾಡುತ್ತಿದ್ದಕ್ಕೆ ನೆತ್ತಿಗೇರಿದ ಕೋಪ: ವಿಧವೆ ಮಹಿಳೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೋದರ ಮಾವ