ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಲ್ಲಿಕಾಯಿ ಸಾಕಷ್ಟು ಆರೋಗ್ಯಕರವಾದ ಗುಣವನ್ನು ಹೊಂದಿದೆ. ಇದನ್ನು ಸೇವಿಸವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಇದು ಕೇವಲ ದೇಹದ ಆರೋಗ್ಯ ಮಾತ್ರವಲ್ಲಿ ಕೂದಲಿನ ಆರೈಕೆಗೆ ಸಹಕಾರಿಯಾಗಿದೆ. ಎಲ್ಲರೂ ಇದನ್ನು ಸೇವಿಸುತ್ತಾರೆ. ಆದರೆ ಕೆಲವರು ಇದನ್ನು ಸೇವಿಸಬಾರದು. ಇದರಿಂದ ಲಾಭಕ್ಕಿಂತ ಹೆಚ್ಚು ಹಾನಿಯಾಗುವುದು ಖಚಿತ.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ 3ನೇ ಸ್ಥಾನ ಫಿಕ್ಸ್ ; ಸಚಿವ ಆರ್.ಅಶೋಕ್ ಭವಿಷ್ಯ
ನಲ್ಲಿಕಾಯಿಯಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ ಮತ್ತು ಇದರಲ್ಲಿ ಆಂಟಿ-ಆಕ್ಸಿಡೆಂಟ್ಗಳ ಅನೇಕ ಪ್ರಯೋಜನಗಳಿವೆ. ನಲ್ಲಿಕಾಯಿಯಲ್ಲಿ ಕಿತ್ತಳೆಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಇದೆ. ಹಲವಾರು ಪ್ರಯೋಜನಗಳಿವೆ. ಆದರೆ ಇದು ನೇಕ ಜನರಿಗೆ ತುಂಬಾ ಹಾನಿಕಾರಕವಾಗಿದೆ. ಯಾವ ಜನರು ಆಮ್ಲಾವನ್ನು ಸೇವಿಸಬಾರದು ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ.
ನಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಎದೆಯುರಿ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಹೈಪರ್ ಅಸಿಡಿಟಿಯಿಂದ ಬಳುತ್ತಿರುವವರು ಹೆಚ್ಚು ಸೇವಿಸಬಾರದು.
ಆಮ್ಲಾವು ಆಂಟಿಪ್ಲೇಟ್ಲೆಟ್ ಗನ್ಗಳನ್ನು ಹೊಂದಿದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಸಾಮಾನ್ಯ ಜನರಿಗೆ ಆಮ್ಲಾ ಒಳ್ಳೆಯದು, ಅವರು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ಈಗಾಗಲೇ ರಕ್ತ ಸಂಬಂಧಿತ ಅಸ್ವಸ್ಥತೆಗಳನ್ನು ಹೊಂದಿರುವ ಜನರು ನಲ್ಲಿಕಾಯಿಯನ್ನು ಸೇವಿಸಬಾರದು.
ನಿಮಗೂ ‘ವಾಹನ ಚಾಲನೆ’ ವೇಳೆಯಲ್ಲೇ ಹೀಗೆ ಆಗಿರಬಹುದು.! ಅದೇನು.? ರಕ್ಷಣೆ ಹೇಗೆ.? ಎನ್ನುವ ಬಗ್ಗೆ ಈ ಸುದ್ದಿ ಓದಿ.!
ಶಸ್ತ್ರಚಿಕಿತ್ಸೆಗೆ ಹೋಗುವವರು ಕೆಲವು ದಿನಗಳವರೆಗೆ ಆಮ್ಲಾ ತಿನ್ನುವುದನ್ನು ನಿಲ್ಲಿಸಬೇಕು.
ನಲ್ಲಿಕಾಯಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಟೈಪ್ -1 ಅಥವಾ ಟೈಪ್ -2 ಡಯಾಬಿಟಿಸ್ನಿಂದ ಬಳಲುತ್ತಿರುವವರಿಗೆ ಆಮ್ಲಾ(ನಲ್ಲಿಕಾಯಿ) ಪ್ರಯೋಜನಕಾರಿಯಾಗಿದೆ. ಆದರೆ ಅವರ ರಕ್ತದಲ್ಲಿ ಸಕ್ಕರೆ ಕಡಿಮೆ ಇರುವವರು ಅಥವಾ ಮಧುಮೇಹ ವಿರೋಧಿ ಔಷಧಗಳನ್ನು ಸೇವಿಸುವವರು ಇದನ್ನು ತಿನ್ನಬಾರದು.
ಆಮ್ಲಾದಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಅನೇಕ ಕಡೆಯಿಂದ ಪ್ರಯೋಜನಕಾರಿಯಾಗಿದೆ. ಹೆಚ್ಚು ನಲ್ಲಿಕಾಯಿ ತಿಂದರೆ ಹೊಟ್ಟೆ ನೋವು, ಹೊಟ್ಟೆ ಭೇದಿ ಮತ್ತು ದೇಹದಲ್ಲಿನ ನೀರಿನ ನಷ್ಟವನ್ನು ಉಂಟುಮಾಡಬಹುದು.