ಹಾಸನ: ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಕಳೆದ ರಾತ್ರಿಯಂದು ಕಲುಷಿತ ಆಹಾರ ಸೇವಿಸಿದಂತ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
ರಾಜ್ಯ ರಾಜಕೀಯದಲ್ಲಿ ‘ನಿವೃತ್ತಿ’ಯ ಬಗ್ಗೆ ಬಿಸಿ ಬಿಸಿ ಚರ್ಚೆ: 92ರಲ್ಲೂ ನಿವೃತ್ತಿಯಿಲ್ಲವೆಂದ ಮಾಜಿ ಸಚಿವ
ಹಾಸನ ಜಿಲ್ಲೆಯ ಆಲೂರುನಲ್ಲಿರುವಂತ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿಯೇ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಆಹಾರ ಸೇವಿಸಿದಂತ 25ಕ್ಕೂ ಹೆಚ್ಚು ವಸತಿ ಶಾಲೆಯ ಮಕ್ಕಳಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಅ.2ರಂದು ‘ಯಶಸ್ವಿನಿ ಯೋಜನೆ’ ಮರುಜಾರಿ
ಅಸ್ವಸ್ಥಗೊಂಡ ಮಕ್ಕಳು ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಸತಿ ಶಾಲೆಯ ಮಕ್ಕಳು ಕಲುಷಿತ ಆಹಾರ ಸೇವಿಸಿದ್ದರಿಂದಲೇ ಅಸ್ವಸ್ಥಗೊಂಡಿದ್ದು ಎಂಬುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.