ನವದೆಹಲಿ: ರಾಷ್ಟ್ರಪತಿಯಾಗಿದ್ದಂತ ರಾಮನಾಥ ಕೋವಿಂದ್ ( President Ram Nath Kovind ) ಅವರ ಅಧಿಕಾರ ಅವಧಿ ಇಂದು ಕೊನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಅವರು ಕೊನೆಯ ನಿರ್ಗಮಿತ ಭಾಷಣವನ್ನು ಮಾಡಿ, ದೇಶದ ಜನತೆಗೆ, ಸಾರ್ವಜನಿಕ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದಂತ ಅವರು 5 ವರ್ಷಗಳ ಹಿಂದೆ, ನಿಮ್ಮ ಚುನಾಯಿತ ಜನ ಪ್ರತಿನಿಧಿಗಳ ಮೂಲಕ ನಾನು ಅಧ್ಯಕ್ಷನಾಗಿ ಆಯ್ಕೆಯಾದೆ. ರಾಷ್ಟ್ರಪತಿಯಾಗಿ ನನ್ನ ಅವಧಿ ಇಂದು ಕೊನೆಗೊಳ್ಳುತ್ತಿದೆ. ನಾನು ನಿಮ್ಮೆಲ್ಲರಿಗೂ ಮತ್ತು ನಿಮ್ಮ ಸಾರ್ವಜನಿಕ ಪ್ರತಿನಿಧಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಹೆಂಡ್ತಿ ಜತೆಗೆ ಕಿತ್ತಾಡಿಕೊಂಡು ಓಡೋಡಿ ಹೋಗಿ ನದಿಗೆ ಹಾರಿದ ಭೂಪ: ಮುಂದೇನಾಯ್ತು ಗೊತ್ತಾ.?
ಕಾನ್ಪುರ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಬೆಳೆದ ಅವರು, ನಮ್ಮ ದೇಶದ ರೋಮಾಂಚಕ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಗೆ ನಾನು ವಂದಿಸುತ್ತೇನೆ ಎಂದರು.
ರಾಷ್ಟ್ರಪತಿಗಳ ಅಧಿಕಾರಾವಧಿಯಲ್ಲಿ ನನ್ನ ಹುಟ್ಟೂರಿಗೆ ಭೇಟಿ ನೀಡಿ, ನನ್ನ ಕಾನ್ಪುರ ಶಾಲೆಯಲ್ಲಿ ಹಿರಿಯ ಶಿಕ್ಷಕರ ಪಾದ ಮುಟ್ಟಿ ಆಶೀರ್ವಾದ ಪಡೆಯುವುದು ಯಾವಾಗಲೂ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ಎಂದು ಅವರು ಅಧಿಕಾರದಿಂದ ನಿರ್ಗಮಿಸುವ ಮುನ್ನಾದಿನದಂದು ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಿ ‘ನಿವೃತ್ತಿ’ಯ ಬಗ್ಗೆ ಬಿಸಿ ಬಿಸಿ ಚರ್ಚೆ: 92ರಲ್ಲೂ ನಿವೃತ್ತಿಯಿಲ್ಲವೆಂದ ಮಾಜಿ ಸಚಿವ
ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ಭಾರತೀಯ ಸಂಸ್ಕೃತಿಯ ವಿಶೇಷತೆಯಾಗಿದೆ. ತಮ್ಮ ಗ್ರಾಮ ಅಥವಾ ಪಟ್ಟಣ ಮತ್ತು ಅವರ ಶಾಲೆಗಳು ಮತ್ತು ಶಿಕ್ಷಕರೊಂದಿಗೆ ಸಂಬಂಧ ಹೊಂದುವ ಈ ಸಂಪ್ರದಾಯವನ್ನು ಮುಂದುವರಿಸುವಂತೆ ನಾನು ಯುವ ಪೀಳಿಗೆಯನ್ನು ವಿನಂತಿಸುತ್ತೇನೆ ಎಂದು ಹೇಳಿದರು.
5 years ago, I was elected as the President through your elected people's representatives. My term as the President is finishing today. I want to express my heartfelt gratitude to all of you & your public representatives: President Ram Nath Kovind on the eve of demitting office pic.twitter.com/zVkoQgQtBh
— ANI (@ANI) July 24, 2022