ಚಿತ್ರದುರ್ಗ: ಆಟ ಆಡುತ್ತಿದ್ದಾಗ ವೇಳೇಯಲ್ಲಿ ಬಾಲಕನೊಬ್ಬನಿಗೆ ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ.
ನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕನನ್ನು ಚಿತ್ರದುರ್ಗ ಜಿಲ್ಲೆಯ ಮೇದೆಹಳ್ಳಿ ಬಿಳಿಕಲ್ಲು ನಾಯಕರಹಟ್ಟಿ ನಿವಾಸಿ ಯಶವಂತ್ (8) ಅಂತ ತಿಳಿದು ಬಂದಿದೆ. ಯಶವಂತ್ ಮನೆ ಮುಂದೆ ಆಟವಾಡುತ್ತಿದ್ದಾಗ, ಬೀದಿನಾಯಿಯೊಂದು ಐದಾರು ಬಾರಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಈ ವೇಳೆಯಲ್ಲಿ ಆತನನ್ನು ಚಿಕಿತ್ಸೆಗಾಗಿ ಆಸ್ಪತೆಗೆ ದಾಖಲು ಮಾಡಿದ್ರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆ ಪೋಲಿಸರು ತನಿಖೆ ಕೈಗೊಂಡಿದ್ದಾರೆ.