ಭೋಪಾಲ್ (ಮಧ್ಯಪ್ರದೇಶ) : ಭೋಪಾಲ್ನ ಖೋಫಿಜಾ ಪ್ರದೇಶದ ಸರ್ಕಾರಿ ಶಾಲೆಯ ಶೌಚಾಲಯದೊಳಗೆ ಎಂಟೂವರೆ ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ನಡೆದಿದೆ.
ಆರೋಪಿಯನ್ನು ಶಾಲೆಯ ಕಾವಲುಗಾರ ಲಕ್ಷ್ಮೀನಾರಾಯಣ ಧನಕ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನದ ಊಟದ ಸಮಯದಲ್ಲಿ ಬಾಲಕಿ ಶೌಚಾಲಯಕ್ಕೆ ಹೋಗಿದ್ದಾಳೆ. ಈ ವೇಳೆ ಶಾಲೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀನಾರಾಯಣ ಧನಕ್ ಸಮಯ ನೋಡಿಕೊಂಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ನಂತ್ರ, ಬಾಲಕಿ ಅಳುತ್ತಿರುವುದನ್ನು ಕಂಡ ಇತರ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬಾಲಕಿ ಹಳದಿ ಅಂಗಿ ಧರಿಸಿರುವ ವ್ಯಕ್ತಿ ಈ ಕೃತ್ಯವೆಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಶಾಲೆಯ ಸಿಬ್ಬಂದಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಶಾಲಾ ಸಿಬ್ಬಂದಿಯನ್ನು ವಿಚಾರಿಸಿದಾಗ ಲಕ್ಷ್ಮೀನಾರಾಯಣ ಎಂಬಾತನೇ ಹಳದಿ ಅಂಗಿ ಧರಿಸಿರುವುದು ಪೊಲೀಸರಿಗೆ ತಿಳಿದು ಬಂದಿದೆ.
ವಿಚಾರಣೆ ವೇಳೆ ಪೊಲೀಸರಿಗೆ ಆರೋಪಿಯ ಬಗ್ಗೆ ತಿಳಿದು ಬಂದಿದ್ದು, ಬಳಿಕ ಬಂಧಿಸಿದ್ದಾರೆ. ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು,
ಹೆಚ್ಚಿನ ತನಿಖೆ ನಡೆಯುತ್ತಿದೆ.
Big news: 2025ರ ವೇಳೆಗೆ ಭಾರತದಲ್ಲಿ ʻಶ್ವಾಸಕೋಶದ ಕ್ಯಾನ್ಸರ್ʼ ಪ್ರಕರಣಗಳು 7 ಪಟ್ಟು ಏರಿಕೆ ಸಾಧ್ಯತೆ: ಅಧ್ಯಯನ
Breaking news: ಕ್ಯಾಲಿಫೋರ್ನಿಯಾದ ಯೊಸೆಮೈಟ್ ಬಳಿ ಭೀಕರ ಕಾಡ್ಗಿಚ್ಚು… ತುರ್ತು ಪರಿಸ್ಥಿತಿ ಘೋಷಣೆ