ಬೆಂಗಳೂರು : ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆಗೆ ಜುಲೈ 28 ಚಾಲನೆ ನೀಡಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
BIGG NEWS : ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಮಾಸಿಕ ಪಿಂಚಣಿ 3 ಸಾವಿರ ರೂ.ಗೆ ಏರಿಕೆ
ಈ ಕುರಿತು ಮಾಹಿತಿ ನೀಡಿರುವ ಸಚಿವ ಪ್ರಭು ಚವ್ಹಾಣ್, ಸಿಎಂ ಬಸವರಾಜ ಬೊಮ್ಮಾಯಿ ಅವರು ಜುಲೈ 28 ಕ್ಕೆ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ. ಈ ಪೋರ್ಟಲ್ ನಲ್ಲಿ ನೋಂದಣಿಯಾಗಿರುವ ಸರ್ಕಾರಿ ಅಥವ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ವಾರ್ಷಿಕ ತಲಾ11 ಸಾವಿರ ರೂ. ದೇಣಿಗೆ ನೀಡುವ ಮೂಲಕ ಸಾರ್ವಜನಿಕರು ದತ್ತು ಪಡೆಯಬಹುದು.
ಜಾನುವಾರುಗಳಿಗಾಗಿ ಆಹಾರ ಯೋಜನೆಯಡಿ ಒಂದು ದಿನಕ್ಕೆ ಒಂದು ಗೋವಿಗೆ 70 ರೂ. ಗಳಂತೆ ಪಾವತಿಸಿ ತಮಗೆ ಇಷ್ಟವಾದ ಗೋವಿಗೆ ಆಹಾರಕ್ಕೆ ದೇಣಿಗೆ ನೀಡಬಹುದು. ಗೋಶಾಲೆಗಳಿಗೆ ದತ್ತು ನೀಡಲು ಇಷ್ಟೇ ಹಣ ನೀಡಬೇಕು ಎಂದು ಇಲ್ಲ. ಕನಿಷ್ಟ 10 ರೂ.ಗಳಿಂದಲೂ ದೇಣಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.