ಬೆಳಗಾವಿ: ಕಾಂಗ್ರೆಸ್ ಮುಖಂಡೆ ನವ್ಯಶ್ರೀ ಹಾಗೂ ರಾಜ್ ಕುಮಾರ್ ಟಾಕಳೆ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕುಮಾರ್ ಟಾಕಳೆ ಮಾಡಿದಂತ ಹನಿಟ್ರ್ಯಾಫ್ ಪ್ರಕರಣಕ್ಕೆ ಇದೀಗ ನವ್ಯಶ್ರೀ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಈ ಇಡೀ ಪ್ರಕರಣದ ಹಿಂದಿನ ಸೂತ್ರಧಾನ ಚನ್ನಪಟ್ಟಣದ ಮೂಲದವರು. ಚನ್ನಪಟ್ಟಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ನಿಲ್ಲಬೇಕು ಎನ್ನುವ ಉದ್ದೇಶ ಹೊಂದಿದ ವ್ಯಕ್ತಿ ಹೀಗೆಲ್ಲಾ ಮಾಡಿಸಿದ್ದಾರೆ. ನನ್ನ ರಾಜಕೀಯ ಜೀವನ ಹಾಳು ಮಾಡಿ, ತಾನು ಚನ್ನಪಟ್ಟಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲೋ ಪ್ಲಾನ್ ನಲ್ಲಿ ಇದೆಲ್ಲಾ ಮಾಡುತ್ತಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದರ ಹಿಂದಿನ ಸ್ಪಷ್ಟ ಕಾರಣವೇನು.? ಬಿಜೆಪಿಗೆ ರಮೇಶ್ ಬಾಬು ಪ್ರಶ್ನೆ
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಕುಮಾರ್ ಟಾಕಳೆ ಒಬ್ಬ ಹೆಣ್ಣುಬಾಕ, ಸಂಸಾರ ಮಾಡೋದಕ್ಕೆ ಅಂತ ಹೋದವಳು ನಾನೇ ಮೊದಲು. ಆಗ ನನಗೆ ಈತನ ಮತ್ತೊಂದು ಮುಖ ಪರಿಚಯವಾಯಿತು ಎಂದರು.
ಕಿಡ್ನಾಪ್, ಮಾನಹಾನಿ, ಮದುವೆ ಮಾಡಿಕೊಂಡು ಮೋಸ, ಕೆಲವೊಮ್ಮೆ ನನ್ನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದರ ಬಗ್ಗೆ ದೂರು ನೀಡುತ್ತೇನೆ. ಹನಿಟ್ರ್ಯಾಪ್ ಎಲ್ಲಾ ಸುಳ್ಳು ಆ ಬಗ್ಗೆಯೂ ದೂರು ನೀಡುತ್ತೇನೆ ಎಂದರು.
ಶ್ರೀಮಂತ ಪಾಟೀಲ್ ಸಚಿವರಾದ ಸಂದರ್ಭದಲ್ಲಿ ಅವರಿಗೆ ವಿಷ್ ಮಾಡೋದಕ್ಕೆ ಹೋಗಿದ್ದೆ. ಅವರಿಗೆ ಓಎಸ್ಡಿಯಾಗಿದ್ದಾಗ ರಾಜಕುಮಾರ ಟಾಕಳೆ ಪರಿಚಯವಾಗಿದ್ದು. ಆ ಬಳಿಕ ನಮ್ಮ ಪರಿಚಯವಾಯಿತು. ಜನವರಿ 4, 2022ರಂದು ನನ್ನ ಕಿಡ್ನಾಪ್ ಆಗಿತ್ತು. ಆಗ ನನ್ನ ಪೊಲೀಸ್ ಈತ ಡೆಸ್ಟ್ರಾಯ್ಡ್ ಮಾಡಿದ. ಆದ್ರೂ ನಾನು ಕೆಲವೊಂದು ಆತನೊಂದಿಗೆ ಚಾಟ್ ಮರಳೆ ಕಲವು ಬ್ಯಾಕ್ ಆಪ್ ತಗೊಂಡಿದ್ದೇನೆ ಎಂದರು.
ಸಚಿವ ಅಶ್ವತ್ಥನಾರಾಯಣ ವಿರುದ್ಧ ಸ್ಪೋಟಕ ಬಾಂಬ್ ಸಿಡಿಸಿದ ಮಾಜಿ MLC ರಮೇಶ್ ಬಾಬು: ನ್ಯಾಯಾಂಗ ತನಿಖೆಗೆ ಆಗ್ರಹ
2020ರ ಮೇ ತಿಂಗಳಿನಲ್ಲಿ ಬೆಂಗಳೂರಿನ ಕುಮಾರಕೃಪಾ ಪ್ರವಾಸಿ ಮಂದಿರದ ಹಿಂಬದಿ ಇರುವ ಗಣೇಶ ದೇವಸ್ಥಾನದಲ್ಲಿ ರಾಜಕುಮಾರ ಟಾಕಳೆ ಹಾಗೂ ನಾನು ಮದುವೆಯಾಗಿದ್ದೇನೆ. ಆತ ನನ್ನ ಗಂಡ. ಕುಮಾರಕೃಪಾ ಸರ್ಕಾರಿ ಕಟ್ಟಡವನ್ನು ಟಾಕಳೆ ದುರುಪಯೋಗ ಮಾಡಿಕೊಂಡಿದ್ದಾನೆ. ನನಗೆ ಆಗಿರುವಂತ ಅನ್ಯಾಯ, ತೊಂದರೆ ಬೇರೆ ಯಾವುದೇ ಮಹಿಳೆಗೆ ಆಗಬಾರದು ಎಂಬುದಾಗಿ ಸ್ಪಷ್ಟ ಪಡಿಸಿದರು.
ನಾನು ಬೆಳಗಾವಿಯಲ್ಲಿಯಾಗಿರುವಂತ ಘಟನೆ ಸಂಬಂಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದೇನೆ. ಬೆಂಗಳೂರಿನಲ್ಲಿ ಸರ್ಕಾರಿ ನಿವಾಸ ಕುಮಾರಕೃಪಾ ಗೆಸ್ಟ್ ಹೌಸ್ ದುರುಪಯೋಗ ಮಾಡಿಕೊಂಡ ಬಗ್ಗೆಯೂ ಹೈಗ್ರೌಂಡ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನನ್ನ ಕಿಡ್ನಾಪ್, ಜೀವನ ಹಾಳು ಮಾಡಿದ್ದರ ಬಗ್ಗೆ ದೂರು ನೀಡಿದ್ದೇನೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ನನ್ನ ಲೆವಲ್ ಗೆ ಮಾತನಾಡೋರು ಇದ್ದರೇ ನಾನು ಮಾತನ್ನಾಡುತ್ತೇನೆ, ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು – DKS
ರಾಜಕುಮಾರ ಟಾಕಳೆ ಮಾಡಿದ ಆರೋಪ ಸುಳ್ಳು. ನಾನು ಆತನಿಗೆ 50 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿಲ್ಲ. ಆತ ಒಬ್ಬ ಗ್ರೂಪ್-ಬಿ ನೌಕರನಾಗಿದ್ದಾನೆ. ಆತನ ಬಳಿಯಲ್ಲಿ 50 ಸಾವಿರ ಹೇಗೆ ಬರೋದಕ್ಕೆ ಸಾಧ್ಯ.? ಒಂದು ವೇಳೆ ಇದ್ದರೂ ಆ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಹೇಳಿದರು.
ಇನ್ನೂ ತಿಲಕ್ ರಾಜ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನವ್ಯಶ್ರೀ, ತಿಲಕ್ ರಾಜ್ ನನ್ನ ಸ್ನೇಹಿತನಾಗಿದ್ದಾನೆ. 13 ವರ್ಷಗಳಿಂದ ನನ್ನ ಕುಟುಂಬದೊಂದಿಗೆ ಒಡನಾಡಿಯಾದಂತ ಸ್ನೇಹಿತ ಎಂಬುದಾಗಿ ಸ್ಪಷ್ಟ ಪಡಿಸಿದರು.