ಬೆಂಗಳೂರು: ಸುಪ್ರೀಂ ಕೋರ್ಟ್ ನಿಂದ ( Supreme Court ) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗ್ರೀನ್ ಸಿಗ್ನಲ್ ಬಳಿಕ, ಬಿಬಿಎಂಪಿ ಚುನಾವಣೆ ( BBMP Election 2022 ) ನಡೆಸೋದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ( Karnataka Election Commission ) ಸಿದ್ಧತೆ ಶುರು ಮಾಡಿದೆ. ಈ ಕಾರಣದಿಂದಾಗಿಯೇ ಮತದಾರರ ಪಟ್ಟಿಗಳನ್ನು ( Voter List ) ತಯಾರಿಸಲು ಅಧಿಕಾರಿಗಳನ್ನು ನೇಮಕ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯಪತ್ರ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸುವ ಸಲುವಾಗಿ ಮತದಾರರ ಪಟ್ಟಿಗಳನ್ನು ಸಿದ್ದಪಡಿಸಲು ನಿಗದಿತ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಮತ್ತು ಬಿಬಿಎಂಪಿಯ ವಿಶೇಷ ಆಯುಕ್ತರು, ಜಂಟಿ ಆಯುಕ್ತರು ದಕ್ಷಿಣ, ಜಂಟಿ ಆಯುಕ್ತರು ಮಹದೇವಪುರ ಇವರನ್ನು ವಾರ್ಡ್ ಗಳನ್ನೊಳಗೊಂಡ ಪ್ರದೇಶಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳೆಂದು ನೇಮಿಸಿದೆ.
ಇವರನ್ನು ಬಿಟ್ಟು ಜಂಟಿ, ಉಪ ಆಯುಕ್ತರುಗಳನ್ನು ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳ ಪ್ರದೇಶಕ್ಕೆ ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳೆಂದು ನೇಮಿಸಿ ಆದೇಶಿಸಿದ್ದಾರೆ.
ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಾರ್ಡುಗಳ ವಾರ್ಡುವಾರ ಮತದಾರರ ಪಟ್ಟಿಯನ್ನು ತಯಾರಿಸಸು ವಿದ್ಯುಕ್ತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ವಿಪತ್ತು ನಿರ್ವಹಣೆಯ ಕರ್ನಾಟಕ ವಿನೂತನ ಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ – ಸಿಎಂ ಬೊಮ್ಮಾಯಿ
ಹೀಗಿದೆ ಮತದಾರರ ಪಟ್ಟಿ ತಯಾರಿಸಲು ನೇಮಿಸಿರುವಂತ ಅಧಿಕಾರಿಗಳ ಪಟ್ಟಿ