ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಈಗ ಈ ನಿಲ್ದಾಣದಲ್ಲಿ 5ಜಿ ನೆಟ್ವರ್ಕ್ ಸಿಗಲಿದೆ ಎನ್ನುವ ಮಾಹಿತಿ ನೀಡಿದೆ. ಈ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋಗೆ ಮತ್ತೊಂದು ಗರಿ ಮೂಡಿದ್ದು, ಟ್ರಾಯ್ʼನ ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ 5ಜಿ ನೆಟ್ವರ್ಕ್ ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬಿಎಂಆರ್ಸಿಎಲ್ ಪಾತ್ರವಾಗಿದೆ.
ಹೌದು, ಈ ಕುರಿತು ಸ್ವತಃ ಬಿಎಂಆರ್ಸಿಎಲ್ ಸಂತಸ ಹಂಚಿಕೊಂಡಿದ್ದು, “ಟ್ರಾಯ್ʼನ ಪೈಲಟ್ ಪ್ರಾಜೆಕ್ಟ್ ಅಡಿಯಲ್ಲಿ 5ಜಿ ನೆಟ್ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬಿಎಂಆರ್ ಸಿಎಲ್ ಪಾತ್ರವಾಗಿದೆ” ಎಂದು ತಿಳಿಸಿದೆ.
ಅದ್ರಂತೆ, ಈ 5ಜಿ ನೆಟ್ವರ್ಕ್ 200 ಮೀಟರ್ ವ್ಯಾಪ್ತಿಯಲ್ಲಿ ಹರಡಿದ್ದು, ಎಂಜಿ ರಸ್ತೆ ನಿಲ್ದಾಣದಲ್ಲಿ ರಿಲಯನ್ಸ್ ಜಿಯೋ ನಿಯೋಜಿಸಿದೆ. ಈ ಪರೀಕ್ಷೆಯು 1.45 ಜಿಬಿಪಿಎಸ್ ಡೌನ್ಲೋಡ್ ಮತ್ತು 65 ಎಂಬಿಪಿಎಸ್ ಅಪ್ಲೋಡ್ ವೇಗವನ್ನ ಸಾಧಿಸಿದೆ. ಅಂದ್ಹಾಗೆ ಇದು 4ಜಿಗಿಂತ 50 ಪಟ್ಟು ವೇಗವಾಗಿದೆ.
BMRCL has become the first Metro in India to test 5G network under a Pilot Project of TRAI. The 5G network radiated in 200 m radius, deployed by Reliance Jio at M G Rd station. The test has achieved 1.45 Gbps Download and 65 Mbps Upload speeds, making it 50 times faster than 4G. pic.twitter.com/jCtFmhOjmH
— ನಮ್ಮ ಮೆಟ್ರೋ (@cpronammametro) July 22, 2022