ಉತ್ತರ ಪ್ರದೇಶ : ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಇದರ ನಡುವೆ ಯುಪಿಯ ಬಹ್ರೈಚ್ ಜಿಲ್ಲೆಯಲ್ಲಿ ಗೇರುವಾ ನದಿಯನ್ನು ದಾಟಲು ಯತ್ನಿಸಿದ ಹುಲಿಯೊಂದು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಕೊನೆಗೂ ಧೈರ್ಯದಿಂದ ಈಜಿ ನದಿಯ ಇನ್ನೊಂದು ಬದಿಯ ಕಾಡನ್ನು ತಲುಪಿರುವ ಘಟನೆ ನಡೆದಿದೆ.
ಈ ಕುರಿತಾದ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ (ಐಎಫ್ಎಸ್) ರಮೇಶ್ ಪಾಂಡೆ ಅವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದು, ಅದರಲ್ಲಿ ಹುಲಿ ನದಿಯಲ್ಲಿ ತೇಲಲು ಹೆಣಗಾಡುತ್ತಿರುವ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಪ್ರವಾಹದಿಂದ ತಪ್ಪಿಸಿಕೊಳ್ಳಲು ಹುಲಿ ಹರಸಾಹಸ ಪಡುತ್ತಿರುವದನ್ನು ನೋಡಬಹುದು.
Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!
ಹುಲಿಯು ಶಕ್ತಿಯುತ ಮತ್ತು ಮಹಾನ್ ಈಜುಗಾರನಾಗಿರುವುದರಿಂದ ಪ್ರವಾಹದ ವಿರುದ್ಧ ನದಿಯನ್ನು ದಾಟಬಹುದು ಮತ್ತು ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಭಾಗವಾದ ಕಟರ್ನಿಯಾಘಾಟ್ ಕಾಡಿನಲ್ಲಿ ತಲುಪಬಹುದು ಎಂದು ಅಧಿಕಾರಿ ಟ್ವೀಟ್ನಲ್ಲಿ ಬರೆದಿದ್ದಾರೆ.
ಹುಲಿ ನದಿ ದಾಟುವಾಗ ನಿಗಾ ಇರಿಸಲಾಗಿತ್ತು. ಆಕಾಶ್ ದೀಪ್ ಭಧವನ್ ನೇತೃತ್ವದ ತಂಡವು ಕಟರ್ನಿಯಾಘಾಟ್ನಲ್ಲಿ ಹೆಚ್ಚಿನ ಪ್ರವಾಹದ ಸಮಯದಲ್ಲಿ ಹುಲಿ ಮತ್ತು ಇತರ ವನ್ಯಜೀವಿಗಳಿಗೆ ಸುರಕ್ಷಿತ ಮಾರ್ಗವನ್ನು ಮೇಲ್ವಿಚಾರಣೆ ಮಾಡಿತ್ತು. ತೆರೈನಲ್ಲಿ ಮಾನ್ಸೂನ್ ರಕ್ಷಣೆ ಮತ್ತು ಗಸ್ತು ತಿರುಗುವಿಕೆಗೆ ಕಠಿಣ ಸಮಯವಾಗಿದೆ ಎಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
However, tiger being a powerful and great swimmer, could cross the river against the current, and reached in jungles of Katerniaghat, part of Dudhwa Tiger Reserve. pic.twitter.com/cc6ak664dE
— Ramesh Pandey (@rameshpandeyifs) July 22, 2022
ಇನ್ನು ವಿಡಿಯೋ ವೀಕ್ಷಿಸಿದ ನೆಟ್ಟಿಗರು ಹುಲಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.