ನವದೆಹಲಿ: ಪ್ರತಿಪಕ್ಷದ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಸೋಲಿಸಿದಂತ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಇಂದು ರಾಷ್ಟ್ರಪತಿ ಚುನಾವಣೆಗೆ ನಡೆದಿದ್ದಂತ ಮತದಾದನ ಮತಏಣಿಕೆ ಕಾರ್ಯ ನಡೆಯಿತು. ಮೊದಲ ಸುತ್ತಿನಿಂದ, ಕೊನೆಯ ಸುತ್ತಿನವರೆಗೂ ಮುನ್ನಡೆಯನ್ನು ಎನ್ ಡಿಎ ಎಭ್ಯರ್ಥಿ ದ್ರೌಪದಿ ಮುರ್ಮು ಅವರು ಕಾಯ್ದುಕೊಂಡಿದ್ದರು. ಇದೀಗ ದ್ರೌಪದಿ ಮುರ್ಮು ಭಾರತದ ನೂತನ ರಾಷ್ಟ್ರಪತಿ, ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದಂತ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರು, ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ ಮತ್ತು ಪಂಜಾಬ್ ರಾಜ್ಯಗಳಿವೆ. ಈ ಸುತ್ತಿನಲ್ಲಿ, ಒಟ್ಟು ಮಾನ್ಯ ಮತಗಳು 1,333. ಮಾನ್ಯ ಮತಗಳ ಒಟ್ಟು ಮೌಲ್ಯ 1,65,664. ದ್ರೌಪದಿ ಮುರ್ಮು 812, ಯಶವಂತ್ ಸಿನ್ಹಾ 521 ಮತಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮೂರನೇ ಸುತ್ತಿನ ಮತ ಎಣಿಕೆಯ ಕೊನೆಯಲ್ಲಿ ಒಟ್ಟು ಮಾನ್ಯ ಮತಗಳಲ್ಲಿ 50% ಗಡಿ ದಾಟಿದ್ದಾರೆ. ದೇಶದ ರಾಷ್ಟ್ರಪತಿಯಾಗಲು ಸಜ್ಜಾಗಿದ್ದಾರೆ.
NDA Presidential candidate #DroupadiMurmu crosses the 50% mark of total valid votes at the end of the third round of counting; set to become the President of the country. pic.twitter.com/SSeAZkr7w1
— ANI (@ANI) July 21, 2022