ರಾಯಚೂರು: ಜಿಲ್ಲೆಯ ಜನತೆ ಇಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಹಾಡ ಹಗಲೇ ಗುತ್ತಿಗೆದಾರನ ಮೇಲೆ ಅಟ್ಯಾಕ್ ಮಾಡಿದಂತ ಹಂತಕರು, ನಡು ರಸ್ತೆಯಲ್ಲಿಯೇ ಮಚ್ಚಿನಿಂದ ಗುತ್ತಿಗೆದಾರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರಿನ ಬಿಎಸ್ ಎನ್ ಎಲ್ ಕಚೇರಿಯ ಬಳಿಯಲ್ಲಿ ನಡೆದಿದೆ.
ರಾಯಚೂರಿನ ಬಿಎಸ್ ಎನ್ ಎಲ್ ಕಚೇರಿಯ ಬಳಿಯಲ್ಲಿ ಇಂದು ಹಾಡಹಗಲೇ ಗುತ್ತಿಗೆದಾರ ಮೆಹಬೂಬ್ ಆಲಿ (30) ಎಂಬುವರನ್ನು ಹಂತಕರು ಮಚ್ಚಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನಡು ರಸ್ತೆಯಲ್ಲಿಯೇ ನಡೆದಂತ ಈ ಘಟನೆ ಕಂಡು ರಾಯಚೂರಿನ ಜನತೆ ಬೆಚ್ಚಿ ಬೀಳುವಂತೆ ಆಗಿದೆ.
ಈ ಹತ್ಯೆಯ ವಿಷಯ ತಿಳಿದು ಸ್ಥಳಕ್ಕೆ ರಾಯಚೂರಿನ ಸದರ್ ಬಜಾರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ಗುತ್ತಿಗೆದಾರನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವಂತ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
BIG NEWS: ರಾಜ್ಯದ ‘ಆರೋಗ್ಯ ಇಲಾಖೆ’ ‘ಗುತ್ತಿಗೆ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್: ‘ವಾರದ ರಜೆ’ ಮಂಜೂರು