ಬೆಂಗಳೂರು: ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವಂತ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
BIG NEWS: ರಾಜ್ಯದ ‘ಕಾಫಿ ಬೆಳೆಗಾರ’ರಿಗೆ ಗುಡ್ ನ್ಯೂಸ್: ‘ಪಂಪ್ ಸೆಟ್ ವಿದ್ಯುತ್ ಶುಲ್ಕ’ ಮರುಪಾತಿಗೆ ಸರ್ಕಾರ ಆದೇಶ
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಎಸಿಬಿ ವಿಶೇಷ ಕೋರ್ಟ್ ನಲ್ಲಿ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು.
ಎಸಿಬಿಯಿಂದ 60 ದಿನಗಳೇ ಕಳೆದರು ಚಾರ್ಜ್ ಶೀಟ್ ಸಲ್ಲಿಸಿರಲಿಲ್ಲ. ಈ ನಡುವೆಯೂ ಪ್ರಕರಣ ಸಂಬಂಧ ವಿಚಾರಣೆ ನಡೆಸಿದಂತ ಎಸಿಬಿ ವಿಶೇಷ ಕೋರ್ಟ್ ಉಪ ತಹಶೀಲ್ದಾರ್ ಪಿಎಸ್ ಮಹೇಶ್ ಗೆ ಕಡ್ಡಾಯ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ಜಾಮೀನು ಅರ್ಜಿಯನ್ನು ಮಹೇಶ್ ಪರ ವಕೀಲರು ಹಿಂಪಡೆದಿದ್ದಾರೆ.