ಬೆಂಗಳೂರು: ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದಂತ ಪ್ರಕರಣ ಸಂಬಂಧ 60 ದಿನಗಳೇ ಕಳೆದರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎಸಿಬಿ ಚಾರ್ಜ್ ಶೀಟ್ ಸಲ್ಲಿಸದೇ ಇರೋ ಸಂಬಂಧ, ಇಂದು ಹೈಕೋರ್ಟ್ ಗರಂ ಆಗಿದೆ. ಅಲ್ಲದೇ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಇಂದು ಈ ಪ್ರಕರಣ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಂತ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರನ್ನೊಳಗೊಂಡ ನ್ಯಾಯಪೀಠವು, 60 ದಿನಗಳೇ ಕಳೆದರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲವೇಕೆ ಎಂಬುದಾಗಿ ಪ್ರಶ್ನಿಸಿತು. ಈ ವೇಳೆ ಎಸಿಬಿ ಪರ ವಕೀಲರು ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂಬುದಾಗಿ ಸಮಜಾಯಿಸಿ ನೀಡಿದರು. ಈ ಸಮಜಾಯಿಸಿಗೆ ಒಪ್ಪದಂತ ನ್ಯಾಯಮೂರ್ತಿಗಳು, ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ ಎಂಬುದಾಗಿ ಗರಂ ಆದ್ರು.
BIG NEWS: ರಾಜ್ಯದ ‘ಆರೋಗ್ಯ ಇಲಾಖೆ’ ‘ಗುತ್ತಿಗೆ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್: ‘ವಾರದ ರಜೆ’ ಮಂಜೂರು
ನಮ್ಮದು ಸಮಗ್ರತೆಯುಳ್ಳ ಸಂಸ್ಥೆಯಾಗಿದೆ ಎಂಬುದಾಗಿ ಹೇಳಿಕೊಳ್ಳುತ್ತೀರಿ. ಹಾಗಿದ್ದೂ 60 ದಿನಗಳೇ ಕಳೆದರು ಪ್ರಕರಣ ಸಂಬಂಧ ಆರೋಪಿಗಳ ಬಗ್ಗೆ ಚಾರ್ಜ್ ಶೀಟ್ ಯಾಕೆ ಸಲ್ಲಿಸಿಲ್ಲ.? ಆರೋಪಿಗಳಿಗೆ ನೀವು ಪರೋಕ್ಷವಾಗಿ ರಕ್ಷಣೆ ನೀಡುವಂತಿದೆ. ಎಸಿಬಿಯನ್ನು ಭ್ರಷ್ಟಾಚಾರ ತಡೆಯೋದಕ್ಕೆ ಸ್ಥಾಪಿಸಲಾಗಿಯೋ ಅಥವಾ ಭ್ರಷ್ಟಾಚಾರಿಗಳನ್ನು ರಕ್ಷಿಸೋದಕ್ಕೋ ಎಂಬುದಾಗಿ ಕುಟುಕಿದರು.
ಇದು ನಾಚಿಕೆಗೇಡಿನ ಸಂಗತಿಯಾಗಿದೆ. ತನಿಖಾಧಿಕಾರಿ ಈವರೆಗೂ ಏಕೆ ಆರೋಪ ಪಟ್ಟಿಸಲ್ಲಿಸಿಲ್ಲ.? ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಆದೇಶಿಸುತ್ತೇನೆ ಎಂಬುದಾಗಿ ಎಸಿಬಿ ಪರ ವಕೀಲರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿತು.