ಬೆಂಗಳೂರು: ಭಾರತೀಯ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಇಂದು ಕರ್ನಾಟಕ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತ್ತು. ನಂತ್ರ, ಅಲ್ಲಿದ್ದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.
ಘಟನೆಯ ಕುರಿತು ತನಿಖೆ ನಡೆಸಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ಟ್ವೀಟ್ ತಿಳಿಸಿದೆ.
#Flash
During a planned sortie for conduct of sea trials off Karwar, an incident of fire was reported onboard INS
Vikramaditya today 20 Jul 22. The fire was brought under control by the ship’s crew using onboard systems. No casualties have been reported (1/2)— SpokespersonNavy (@indiannavy) July 20, 2022
ನೌಕೆ INS ವಿಕ್ರಮಾದಿತ್ಯ ಜನವರಿ 2014 ರಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿತು. ಇದನ್ನು ನವೆಂಬರ್ 2013 ರಲ್ಲಿ ಉತ್ತರ ರಷ್ಯಾದ ಸೆವೆರೋಡ್ವಿನ್ಸ್ಕ್ನಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಈಗ ಇದು ಕರ್ನಾಟಕದ ಕಾರವಾರದಲ್ಲಿದೆ. ಇದು ಏರ್ ವಿಂಗ್ MiG 29K ಫೈಟರ್ ಜೆಟ್ಗಳು ಮತ್ತು ಕಾಮೋವ್ ಹೆಲಿಕಾಪ್ಟರ್ಗಳನ್ನು ಒಳಗೊಂಡಿದೆ.
ಭಾರತೀಯ ನೌಕಾಪಡೆಯ ಅತಿದೊಡ್ಡ ಮತ್ತು ಭಾರವಾದ ಹಡಗು ಇದಾಗಿದ್ದು, 40,000 ಟನ್ ತೂಕ ಹೊಂದಿದೆ.
ಹಂದಿಗಳಲ್ಲಿ ‘ಆಫ್ರಿಕನ್ ಹಂದಿ ಜ್ವರ’ ಪತ್ತೆ : ಲಕ್ನೋದಲ್ಲಿ ಹಂದಿಮಾಂಸ ಮಾರಾಟ ನಿಷೇಧ | Lucknow bans sale of pork