ಕೆಎನ್ಎನ್ಡಿಜಿಟಲ್ ಡೆಸ್ಕ್ : ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ದಕ್ಷಿಣ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಧ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಕೀಯ ಕಾರ್ಯಕ್ರಮದ ನಿಮಿತ್ತಾ ಪವನ್ ಕಲ್ಯಾಣ್ ಗೋದಾವರಿ ಜಿಲ್ಲೆಗಳಲ್ಲಿ ಎರಡು ದಿನದ ಪ್ರವಾಸ ಮಾಡಿದರು. ಈ ಪ್ರಕ್ರಿಯೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು, ವೈರಲ್ ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಹಾಗಾನೇ ಈ ತಿಂಗಳ 24 ರಂದು ನಡೆಯಬೇಕಿದ್ದ ಜನವಾಣಿ ಕಾರ್ಯಕ್ರಮವನ್ನ ವೈರಲ್ ಜ್ವರದಿಂದಾಗಿ ಮುಂದೂಡಲಾಗಿದೆ. ಈ ತಿಂಗಳ 31ರಂದು ಮತ್ತೆ ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷದ ಪಿಎಸಿ ಅಧ್ಯಕ್ಷ ನಾದೆಂಡ್ಲ ಮನೋಹರ್ ಹೇಳಿದರು.
ಆದಾಗ್ಯೂ, ವೈರಲ್ ಜ್ವರದಿಂದ ಬಳಲುತ್ತಿರುವ ಪವನ್ ಪ್ರಸ್ತುತ ಹೈದರಾಬಾದ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವ್ರು ತಮ್ಮ ಚಿತ್ರಗಳ ಚಿತ್ರೀಕರಣಕ್ಕೆ ವಿರಾಮ ನೀಡಿದ್ದು, ಈ ವಿಷಯವು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇನ್ನು ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದು, ತಮ್ಮ ನೆಚ್ಚಿನ ನಾಯಕನಿಗೆ ತಮ್ಮ ಆರೋಗ್ಯವನ್ನ ನೋಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ.