ಬಾಲಿ (ಇಂಡೋನೇಷ್ಯಾ): ಇಂಡೋನೇಷ್ಯಾದ ಬೆಂಗ್ಕುಲುವಿನಲ್ಲಿ ಮಂಗಳವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಇಂಡೋನೇಷ್ಯಾದ ಬೆಂಗ್ಕುಲುವಿನ ನೈಋತ್ಯಕ್ಕೆ 46 ಕಿಮೀ ದೂರದಲ್ಲಿ ಮತ್ತು 57.17 ಕಿಮೀ ಆಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ಇಂಡೋನೇಷ್ಯಾದ ಏಪ್ರಿಲ್ನಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿತ್ತು. ಏಪ್ರಿಲ್ 19 ರಂದು ಇಂಡೋನೇಷ್ಯಾದ ಸುಲವೇಸಿಯಲ್ಲಿ ರಿಚರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿತ್ತು ಮತ್ತು ಏಪ್ರಿಲ್ 5 ರಂದು ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಉತ್ತರ ಮಾಲುಕುದಲ್ಲಿ 6.0 ತೀವ್ರತೆಯ ಭೂಕಂಪವು ಸಂಭವಿಸಿತ್ತು.