ಬೆಂಗಳೂರು: 2022-23ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆಯಲ್ಲಿ ಘೋಷಿಸಿದಂತೆ, ರಾಜ್ಯ ಸರ್ಕಾರದಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರೈತರಿಗೆ ಘೋಷಿಸಿದ್ದಂತ ಡಿಸೇಲ್ ಸಹಾಯಧವನ್ನು ವಿತರಿಸೋ ಸಂಬಂಧದ ರೈತ ಶಕ್ತಿ ಯೋಜನೆಯ ವಿಧಾನ, ಮಾರ್ಗಸೂಚಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ರೈಜರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
BIG NEWS: ಇಂದು ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ | CBSE Result 2022
ಈ ಸಂಬಂಧ ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, 2022-23ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ-20ರಲ್ಲಿನ ಕಾರ್ಯಕ್ರಮವಾದ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ.250ರಂತೆ ಗರಿಷ್ಟ ಐದು ಎಕರೆಗೆ ಡಿಸೇಲ್ ಸಹಾಯಧವನ್ನು ನೀಡಲು, ರೈತ ಶಕ್ತಿ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲು ಘೋಷಿಸಲಾಗಿತ್ತು ಎಂದು ತಿಳಿಸಿದ್ದಾರೆ.
ನಿಮ್ಗೆ ‘ಪ್ರಕೃತಿ’ ಮಡಿಲಲ್ಲಿ ‘ಒಂದು ದಿನ ಪ್ರವಾಸ’ ಮಾಡಿ ಬರೋ ಆಸೆ ಇದ್ಯಾ.? ಇಲ್ಲಿದೆ KSRTCಯಿಂದ ಸುವರ್ಣಾವಕಾಶ.!
ಸರ್ಕಾರ ಘೋಷಿಸಿದಂತೆ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ ರೂ.250ಗಳಂತೆ ಗರಿಷ್ಟ ಐದು ಎಕರೆಗೆ ಡಿಬಿಟಿ ಮೂಲಕ ಡಿಸೇಲ್ ಗೆ ಸಹಾಯಧನ ನೀಡಲು ರೈತ ಶಕ್ತಿ ಎಂಬ ಹೊಸ ಯೋಜನೆಯ ವಿಧಾನ ಹಾಗೂ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಆದೇಶಿದ್ದಾರೆ.
ಅಂದಹಾಗೇ FRUITS ತಂತ್ರಾಂಶದಲ್ಲಿ ನೋಂದಾವಣಿಗೊಂಡ ರೈತರು ಹೊಂದಿರುವ ಭೂ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ.250ರಂತೆ ಗರಿಷ್ಠ ಐದು ಎಕರೆಗೆ ರೂ.1250ರವರೆಗೆ ಡಿಸೇಲ್ ಸಹಾಯಧವನ್ನು ನೀಡಲಾಗುತ್ತದೆ.
ವರದಿ : ವಸಂತ ಬಿ ಈಶ್ವರಗೆರೆ