ಹಾವೇರಿ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2022-23 ನೇ ಸಾಲಿನಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ವಿತರಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಆಯ್ಕೆಯಾಗುವ ಪ್ರತಿ ಫಲಾನುಭವಿಗೆ ಐದು ವಾರದ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ರೈತ ಮಹಿಳೆಯರಿಗೆ, ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರಿಗೆ, ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಸದಸ್ಯರಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ಅರ್ಜಿ ನಮೂನೆಗಳನ್ನು ಹತ್ತಿರದ ಪಶುವೈದ್ಯ ಸಂಸ್ಥೆಗಳಿಂದ ಪಡೆದು ಭರ್ತಿ ಮಾಡಿ, ಆಧಾರ ಕಾರ್ಡ್, ಎರಡು ಫೋಟೋ, ಬಿ.ಪಿ.ಎಲ್ ಪಡಿತರ ಚೀಟಿ ಹಾಗೂ ಸಾಮಾನ್ಯ ಫಲಾನುಭವಿ ಹೊರತುಪಡಿಸಿ, ಉಳಿದ ಎಲ್ಲ ವರ್ಗದವರು ಜಾತಿ ಪ್ರಮಾಣ ಪತ್ರದ ನಕಲು ಪ್ರತಿಗಳೊಂದಿಗೆ ಆಯಾ ತಾಲೂಕಿನ ಪಶು ಆಸ್ಪತ್ರೆಗೆ ಜುಲೈ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಮುಖ್ಯ ಪಶು ವ್ಯೆದ್ಯಾಧಿಕಾರಿಗಳು (ಆಡಳಿತ) ಅಥವಾ ಹತ್ತಿರದ ಪಶುವೈದ್ಯ ಸಂಸ್ಥೆಗಳನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.