ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ( Mysore Dasara Mahotsav 2022 ) ದಿನಾಂಕ ನಿಗದಿ ಪಡಿಸಲಾಗಿದೆ. ಹೀಗೆ ನಿಗದಿ ಮಾಡೋ ಬರದಲ್ಲಿ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿ ಸಭೆಯ ಬಗ್ಗೆ ಮಾಡಿದಂತ ಯಡವಟ್ಟು ಬಟಾಬಯಲಾಗಿದೆ.
ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ಪೋಟೋ, ವೀಡಿಯೋ ಚಿತ್ರೀಕರಣ ಮಾಡದಂತೆ ಆದೇಶ ಹೊರಡಿಸಿ, ರಾಜ್ಯದ ಜನತೆಗೆ ಕೆಂಗಣ್ಣಿಗೆ ಗುರಿಯಾದ ಬಳಿಕ ವಾಪಾಸ್ ಪಡೆದಿತ್ತು. ರಾತ್ರೋ ರಾತ್ರಿ ಹೊರಡಿಸಿದಂತ ಆದೇಶದಲ್ಲಿ ಕನ್ನಡದ ಕಗ್ಗೊಲೆಯನ್ನು ಮಾಡಲಾಗಿತ್ತು. ಈ ಮೂಲಕ ಸರ್ಕಾರದ ಉಪ ಕಾರ್ಯದರ್ಶಿಗೆ ಕನ್ನಡ ಬರೋದಿಲ್ವಾ..? ಅವರನ್ನು ಕೂಡಲೇ ಅಮಾನತುಗೊಳಿಸುವಂತೆಯೂ ಸೋಷಿಯಲ್ ಮೀಡಿಯಾದಲ್ಲಿ ( Social Media ) ಕನ್ನಡಿಗರು ಆಗ್ರಹಿಸಿದ್ದರು.
ಈ ಯಡವಟ್ಟಿನ ಬೆನ್ನಲ್ಲೇ, ಇಂದು ಮೈಸೂರು ದಸರಾ ಮಹೋತ್ಸವ-2022ರ ಉನ್ನತ ಮಟ್ಟದ ಸಮಿತಿ ಸಭೆಯ ಪತ್ರಿಕೆಯಲ್ಲಿ ದಿನಾಂಕವನ್ನೇ ತಪ್ಪಾಕಿದೆ. ಮೈಸೂರು ದಸರಾ ಮಹೋತ್ಸವ ಕಾರ್ಯಸೂಚಿಯಲ್ಲಿ ದಿನಾಂಕ 19-07-2022 ಎಂಬುದಾಗಿ ಪ್ರಿಂಟ್ ಮಾಡಿಸೋ ಬದಲಾಗಿ ದಿನಾಂಕ 19-07-2021 ಹಾಕಿ ಯಡವಟ್ಟು ಮಾಡಿದ್ದು ಬಟಾಬಯಲಾಗಿದೆ.
ಈ 8 ಅಪಾಯಕಾರಿ ಅಪ್ಲಿಕೇಶನ್ ಗಳು ನಿಮ್ಮ ಹಣ, ಡೇಟಾವನ್ನು ಕದಿಯುತ್ತವೆ.! ಕೂಡಲೇ ತೆಗೆದು ಹಾಕಿ | Dangerous Apps
ಇನ್ನೂ ರಾಜ್ಯ ಸರ್ಕಾರದ ಈ ತಪ್ಪಿನ ಬಗ್ಗೆ ಟ್ವಿಟ್ ಮಾಡಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರ 2021ರಲ್ಲಿಯೇ ಉಳಿದುಬಿಟ್ಟಿದೆ ‘ಟೇಕ್ ಆಪ್’ ಆಗಿಯೇ ಇಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ? ಎಂಬುದಾಗಿ ವ್ಯಂಗ್ಯವಾಡಿದ್ದಾರೆ.
.@BJP4Karnataka ಸರ್ಕಾರ
2021ರಲ್ಲಿಯೇ ಉಳಿದುಬಿಟ್ಟಿದೆ
'ಟೇಕ್ ಆಪ್'
ಆಗಿಯೇ ಇಲ್ಲ ಎನ್ನುವುದಕ್ಕೆ
ಬೇರೆ ಸಾಕ್ಷಿ ಬೇಕೇ? pic.twitter.com/vfPbl79iim— Siddaramaiah (@siddaramaiah) July 19, 2022