ಬೆಂಗಳೂರು: ಮಾನ್ಸೂನ್ ಮಳೆಯ ( Monsoon Rain ) ಆರ್ಭಟ ಹೆಚ್ಚಾಗುತ್ತಿದ್ದಂತೇ, ರಾಜ್ಯದಲ್ಲಿ ನೆರೆ-ಪ್ರವಾಹದ ಜೊತೆ ಜೊತೆಗೆ ಆತಂಕ ಸೃಷ್ಠಿಸುವಂತೆ ಡೆಂಗ್ಯೂ ಕೇಸ್ ಗಳು ( Dengue Cases ) ಸಹ ಹೆಚ್ಚಾಗುತ್ತಿವೆ. ಕಳೆದ 18 ದಿನಗಳಲ್ಲೇ ಬರೋಬ್ಬರಿ 910 ಮಂದಿಗೆ ಜ್ವರ ಕಾಣಿಸಿಕೊಂಡಿದೆ.
ಹೌದು.. ರಾಜ್ಯದಲ್ಲಿ 18 ದಿನಗಳಲ್ಲಿ 910 ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈ ಮೂಲಕ ಇಲ್ಲಿಯವರೆಗೆ 3,384 ಜನರಿಗೆ ಡೆಂಗ್ಯೂ ಕೇಸ್ ಏರಿಕೆಯಾದಂತೆ ಆಗಿದೆ.
ಅಂದಹಾಗೇ ಬೆಂಗಳೂರು ನಗರದಲ್ಲಿ 585, ದಕ್ಷಿಣ ಕನ್ನಡ -176, ಉಡುಪಿ-356, ಚಿತ್ರದುರ್ಗ 163, ದಾವಣಗೆರೆ 114, ಹಾಸನ 124, ಬೆಳಗಾವಿ 103, ಕೊಪ್ಪಳ 100, ಮೈಸೂರು 346, ಶಿವಮೊಗ್ಗ 158, ಕಲಬುರ್ಗಿ 101 ಹಾಗೂ ವಿಜಯಪುರ 110 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಜನವರಿ 1ರಿಂದ ಜೂನ್ 24ರವರೆಗೆ 62,357 ಮಂದಿಯನ್ನು ಡೆಂಗ್ಯೂ ಶಂಕೆಯಿಂದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 3,384 ಮಂದಿಗೆ ಡೆಂಗ್ಯೂ ನಿಂದಾಗಿ ಜ್ವರ ಕಾಣಿಸಿಕೊಂಡಿದ್ದು ದೃಢಪಟ್ಟಿದೆ.
‘ಬಿಎಂಟಿಸಿ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ‘ವಾಯುವಜ್ರ ಬಸ್’ ಸಂಚಾರ ಪುನರಾರಂಭ