ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸುದ್ದಿಯೊಂದು ವೈರಲ್ ಆಗುತ್ತಿದೆ. ಅದ್ರರಲ್ಲಿ ಭಾರತ ಸರ್ಕಾರ ಅಂದ್ರೆ ಪ್ರಧಾನಿ ಮೋದಿಯವರು ಮದ್ಯ ಸೇವಿಸುವ ಜನರಿಗೆ ಮದ್ಯದ ಪೈಪ್ಲೈನ್ ಸಂಪರ್ಕವನ್ನ ನೀಡಲಿದ್ದಾರೆ ಎಂದಿದೆ. ಇಷ್ಟಕ್ಕೂ ಈ ಸುದ್ದಿ ನಿಜವೇ.?
ವೈರಲ್ ಸುದ್ದಿಯಲ್ಲಿ ಇರೋದೇನು.?
“ಪ್ರಧಾನಿ ಮೋದಿಯವರು ಮದ್ಯ ಸೇವಿಸುವ ಜನರಿಗೆ ಮದ್ಯದ ಪೈಪ್ಲೈನ್ ಸಂಪರ್ಕವನ್ನ ನೀಡಲಿದ್ದಾರೆ. ಸೇರಲು ಆಸಕ್ತಿ ಇರುವವರು ಮದ್ಯದ ಸಂಪರ್ಕಕ್ಕೆ 11 ಸಾವಿರ ಡಿಮ್ಯಾಂಡ್ ಡ್ರಾಫ್ಟ್ ಮಾಡಿ ಸರಕಾರಕ್ಕೆ ಕಳುಹಿಸಿ, ಒಂದು ತಿಂಗಳೊಳಗೆ ಪರಿಶೀಲಿಸಲಾಗುವುದು. ಇದರ ನಂತರ, ಅರ್ಜಿದಾರರಿಗೆ ಮದ್ಯದ
ಸಂಪರ್ಕವನ್ನು ಲಭ್ಯಗೊಳಿಸಲಾಗುತ್ತದೆ” ಎಂದಿದೆ.
ಸುದ್ದಿಯ ಸತ್ಯಾಸತ್ಯತೆಯೇನು?
ಈ ಸುದ್ದಿಯ ಸತ್ಯಾಸತ್ಯತೆಯನ್ನ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಪರಿಶೀಲಿಸಿದಾಗ, ಇದೊಂದು ಸುಳ್ಳು ಸುದ್ದಿ ಅನ್ನೋದು ತಿಳಿದುಬಂದಿದೆ. ಇದುವರೆಗೂ ಅಂತಹ ಯಾವುದೇ ನಿರ್ಧಾರವನ್ನ ಸರ್ಕಾರ ತೆಗೆದುಕೊಂಡಿಲ್ಲ.
PIB ಸತ್ಯ ಪರಿಶೀಲನೆ..!
Chill guys,
Don’t get your hopes too high‼️#PIBFactCheck pic.twitter.com/34zeYEKByq
— PIB Fact Check (@PIBFactCheck) July 18, 2022