ದೆಹಲಿ: ಸಾಕು ಪ್ರಾಣಿಯಾದ ಮೇಕೆಯೊಂದನ್ನು ಮಾಲೀಕ ಮಾರಾಟ ಮಾಡಿದ್ದು, ಈ ವೇಳೆ ಮೇಕೆ ಮಾಲೀಕನ ಹೆಗಲ ಮೇಲೆ ತನ್ನ ಮುಖವನ್ನಿಟ್ಟು ಅಳುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದ್ರೆ ಈ ವಿಡಿಯೋ ನೋಡಿದವರ ಕಣ್ಣಂಚಲ್ಲಿ ನೀರು ತರಿಸುತ್ತಿದೆ.
ವಿಡಿಯೋದಲ್ಲಿ, ಮಾಲೀಕ ಬೇರೊಬ್ಬರಿಗೆ ಮೇಕೆಯನ್ನು ಮಾರಾಟ ಮಾಡುತ್ತಿದ್ದಾನೆ. ಈ ವೇಳೆ ಮೇಕೆ ಮಾಲೀಕನ ಹೆಗಲ ಮೇಲೆ ತನ್ನ ಮುಖವನ್ನಿಟ್ಟು ಅಳುತ್ತಿರುವ ದೃಶ್ಯವನ್ನು ನೋಡಬಹುದು.
Goat brought to be sold hugs owner, cries like human 💔😭 pic.twitter.com/k5LwYRKDqW
— Ramasubramanian V. Harikumar 💎 (@Ram_Vegan) July 15, 2022
ಈ ವೀಡಿಯೊವನ್ನು @ram_vegan ಎನ್ನುವವರು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ಈ ಪೋಸ್ಟ್ ನ್ನು ಶೇರ್ ಮಾಡಿದ್ದಾರೆ. ವೀಡಿಯೊವನ್ನು ಚಿತ್ರೀಕರಿಸಿದ ಸ್ಥಳವನ್ನು ಟ್ವಿಟರ್ ಬಳಕೆದಾರರು ಬಹಿರಂಗಪಡಿಸಿಲ್ಲ. ಆದಾಗ್ಯೂ, ಈದ್ ಉಲ್ ಅಧಾ ಸಮಯದಲ್ಲಿ ಮೇಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಂದಾಗ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.