ದೆಹಲಿ: ನವಜಾತ ಶಿಶುಗಳನ್ನು ದತ್ತು ನೀಡುವ ನೆಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ಅನ್ನು ದೆಹಲಿ ಪೊಲೀಸರು ಬೇಧಸಿದ್ದು, ಐವರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇದರೊಂದಿಗೆ ಎರಡೂವರೆ ತಿಂಗಳ ಮಗುವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಬಬ್ಲು ಶಾ (28), ಬರ್ಖಾ (28), ವೀಣಾ (55), ಮಧು ಶರ್ಮಾ (50), ಜ್ಯೋತಿ (32), ಪವನ್ (45), ಮತ್ತು ಸಲ್ಮಿ ದೇವಿ ಎಂದು ಗುರುತಿಸಲಾಗಿದೆ. ಇವರನ್ನು ಕ್ರೈಂ ಬ್ರಾಂಚ್ನ ತಂಡವೊಂದು ಬಂಧಿಸಿದೆ. ಖಚಿತ ಮಾಹಿತಿ ಮೇರೆಗೆ ಉತ್ತಮ್ನಗರದ ಆಟೋ ಸ್ಟ್ಯಾಂಡ್ ಬಳಿ ಬಲೆ ಬೀಸಿದ್ದು, ಗಂಡು ಮಗುವನ್ನು ಮಾರಾಟ ಮಾಡಲು ಬಂದಿದ್ದ ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಡು ಮಗುವೊಂದನ್ನು 6.5 ಲಕ್ಷಕ್ಕೆ ಮಾರಾಟ ಮಾಡುವಾಗ ಈ ಗ್ಯಾಂಗ್ ತಗಲಾಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Good News : ಶಿಕ್ಷಣ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : FDAಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ