ಹಾವೇರಿ : ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಸೌಲಭ್ಯಕ್ಕಾಗಿ ನಿರ್ವಾಹಕ ಮತ್ತು ಕ್ಲೀನರ್ ಗಳ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೋಂದಣಿಯಾದ ಫಲಾನುಭವಿಗಳು ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ. ಐದು ಲಕ್ಷ ಹಾಗೂ ಅಪಘಾತದಿಂದ ಶಾಶ್ವತ ದುರ್ಬಲತೆಹೊಂದಿದಾಗ ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ. ಎರಡು ಲಕ್ಷದವರೆಗೆ ಪರಿಹಾರ ನೀಡಲಾಗುವುದು.
ಅಭ್ಯರ್ಥಿಗಳು ರಾಜ್ಯದ ನಿವಾಸಿಯಾಗಿರಬೇಕು ಹಾಗೂ 20 ರಿಂದ 70 ವರ್ಷದೊಳಗಿರಬೇಕು. ಮೋಟಾರು ವಾಹನಗಳ ಕರ್ನಾಟಕ ನಿಯಮಗಳು, 1989 ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನೀಡಲಾಗಿರುವ ಊರ್ಜಿತ ನಿರ್ವಾಹಕ ಪರವಾನಿಗೆಯನ್ನು ಹೊಂದಿರಬೇಕು. ವಾಣಿಜ್ಯ ಸಾರಿಗೆ ವಾಹನ, ಸಂಸ್ಥೆಯಲ್ಲಿ ಹಿಂದಿನ 12 ತಿಂಗಳಿನಲ್ಲಿ ತೊಂಬತ್ತು ದಿನಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಬೇಕು. ಒಮ್ಮೆ ನೋಂದಣಿಯಾದನಂತರ ನೀಡಲಾದ ಗುರುತಿನ ಚೀಟಿಯು ಮೂರು ವರ್ಷಗಳವರೆಗೂ ಊರ್ಜಿತದಲ್ಲಿರುತ್ತದೆ. ನಂತರ ನವೀಕರಣ ಶುಲ್ಕದೊಂದಿಗೆ ಮತ್ತು ಇತರೆ ನಿಗಧಿಪಡಿಸಿದ ದಾಖಲೆಗಳನ್ನು ನೋಂದಣಾಧಿಕಾರಿಗಳಿಗೆ ಸಲ್ಲಿಸಿ ನವೀಕರಿಸಬೇಕು.
ಹಾವೇರಿ: ಜಲ ಸಾಹಸ ಕ್ರೀಡಾ ಉಪಕರಣ ಸೌಲಭ್ಯಕ್ಕೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ನಿರ್ವಾಹಕ ಮತ್ತು ಕ್ಲೀನರ್ಗಳ ನೋಂದಣಿಯಾದ ನಂತರ ವೃತ್ತಿಯನ್ನು ಬದಲಾಯಿಸಿದಲ್ಲಿ ಫಲಾನುಭವಿಯಾಗಿ ಮುಂದುವರೆಯಲು ಅನರ್ಹನಾಗುತ್ತಾನೆ. ಫಲಾನುಭವಿಯು ಅಸಂಘಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಅನುಸೂಚಿ 2ರಲ್ಲಿ ನೌಕರರ ಭವಿಷ್ಯ ನಿಧಿಗಳ ಮತ್ತು ಸಂಕೀರ್ಣ ಉಪಬಂಧಗಳ ಅಧಿನಿಯಮ 1952(1952ರ 19)(EPF Act), ನೌಕರರ ರಾಜ್ಯ ವಿಮಾ ಅಧಿನಿಯಮ 1948(1948ಡಿ 34)( ESIC Act), ನೌಕರರ ನಷ್ಟ ಪರಿಹಾರ ಅಧಿನಿಯಮ 1923(1923 8), ಕೈಗಾರಿಕಾ ವಿವಾದಗಳಧಿನಿಯಮ 1947(1947ಡಿ 14), ಪ್ರಸೂತಿ ಸೌಕರ್ಯ ಅಧಿನಿಯಮಗಳ 1961(1961ಡಿ 53) ಹಾಗೂ ಉಪದಾನ ಸಂದಾಯ ಅಧಿನಿಯಮ 1972 (1972ಡಿ 39)ಕಾಯ್ದೆಗೆ ಒಳಪಟ್ಟಿರಬಾರದು. ಈ ಕಾಯ್ದೆಗಳಿಗೆ ಒಳಪಟ್ಟಿರುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿರುವ ಸ್ವಯಂ ಘೋಷಣೆಯನ್ನು ಒಪ್ಪಿ ಸಹಿ ಮಾಡಬೇಕು ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳ ಕಚೇರಿ,ರೂಂ.ನಂ.28 ಬಿ ಬ್ಲಾಕ್, 2ನೇ ಮಹಡಿ,ಜಿಲ್ಲಾಡಳಿತ ಭವನ, ದೇವಗಿರಿ-ಹಾವೇರಿ ಈ ವಿಳಾಸದಲ್ಲಿ ಸಂಪರ್ಕಿಸಲು ಕೋರಲಾಗಿದೆ.