ಬೆಂಗಳೂರು: ಇಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಗೆ ( President Election 2022 ) ಮತದಾನ ನಡೆಯಿತು. ಕರ್ನಾಟಕದ 226 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೆ ಮತದಾನ ಕರ್ನಾಟಕದಲ್ಲಿ ಪೂರ್ಣಗೊಂಡಿದೆ.
‘ಡಿಕೆಶಿ ಒಡೆತನದ ಸ್ಕೂಲ್’ಗೆ ಬಾಂಬ್ ಬೆದರಿಕೆ: ನನ್ನ ಹೆಸರು ಮಿಸ್ ಯೂಸ್ ಮಾಡಬೇಡಿ – ನಟ ಹುಚ್ಚ ವೆಂಕಟ್ ಮನವಿ
ಬೆಂಗಳೂರಿನ ವಿಧಾನಸೌಧದಲ್ಲಿರುವಂತ 106ರಲ್ಲಿನ ಕೊಠಡಿಯಲ್ಲಿ ರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕದ 224 ಶಾಸಕರು, ಒಬ್ಬ ರಾಜ್ಯಸಭಾ ಸದಸ್ಯರು ಒಬ್ಬ ಲೋಕಸಭಾ ಸದಸ್ಯರು ಸೇರಿದಂತೆ 226 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( Farmer PM HD Devegowdha ) ಹಾಗೂ ವಿ ಶ್ರೀನಿವಾಸ್ ಪ್ರಸಾದ್ ಗೆ ಅನಾರೋಗ್ಯದ ಹಿನ್ನಲೆಯಲ್ಲಿ ದೆಹಲಿಯ ಸಂಸತ್ ಭವನದಲ್ಲಿ ಮತದಾನದ ಬದಲು ಹೀಗಾಗಿ ಬೆಂಗಳೂರಿನಲ್ಲಿಯೇ ಮತ ಚಲಾಯಿಸೋದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದಾಗಿ ಬೆಂಗಳೂರಿನಲ್ಲಿಯೇ ಮಾಜಿ ಪಿಎಂ ಹೆಚ್ ಡಿ ದೇವೇಗೌಡ ಅವರು ವೀಲ್ ಚೇರ್ ನಲ್ಲಿ ಬಂದು ಮತ ಹಾಕಿದರು.
ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೇ ಮತದಾನ ಪೂರ್ಣಗೊಂಡಿದೆ. ರಾತ್ರಿ 9.30ರ ವಿಮಾನದಲ್ಲಿ ದೆಹಲಿಗೆ ಇಂದು ಮತದಾನದ ಬ್ಯಾಲೆಟ್ ಬಾಕ್ಸ್ ಅನ್ನು ರವಾನೆ ಮಾಡಲಾಗುತ್ತದೆ.