ನವದೆಹಲಿ: ಅದಾನಿ ಗ್ರೂಪ್ ಬೆಂಬಲಿತ ಎಫ್ಎಂಸಿಜಿ ಸಂಸ್ಥೆ ಅದಾನಿ ವಿಲ್ಮಾರ್ ಸೋಮವಾರ ಜಾಗತಿಕ ಬೆಲೆಗಳ ಕುಸಿತದಿಂದಾಗಿ ಅಡುಗೆ ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ಗೆ ₹ 30 ರಷ್ಟು ಕಡಿತಗೊಳಿಸಿದೆ ಎಂದು ಘೋಷಿಸಿದೆ. ಈ ಮೂಲಕ ಸೋಯಾಬೀನ್ ತೈಲದಲ್ಲಿ ತನ್ನ ಅತ್ಯಧಿಕ ಕಡಿತವನ್ನು ಮಾಡಿದೆ ಎನ್ನಲಾಗಿದೆ.
ಹೊಸ ಬೆಲೆಗಳ ಸ್ಟಾಕ್ ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ತಲುಪಲಿವೆ. ಆಹಾರ ಸಚಿವಾಲಯವು ಖಾದ್ಯ ತೈಲ ಸಂಸ್ಥೆಗಳಿಗೆ ಜಾಗತಿಕ ಅಡುಗೆ ಎಣ್ಣೆ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ನಿರ್ದೇಶಿಸಿದ ನಂತರ ಈ ಕ್ರಮವನ್ನು ಜಾರಿಗೆ ತಂದಿದೆ. ಖಾದ್ಯ ತೈಲ ಬೆಲೆಗಳ ಬಗ್ಗೆ ಚರ್ಚಿಸಲು ಆಹಾರ ಸಚಿವಾಲಯವು ಜುಲೈ 6 ರಂದು ಸಭೆ ಕರೆದಿತ್ತು ಈ ವೇಳೆ ಜಾಗತಿಕ ಅಡುಗೆ ಎಣ್ಣೆ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಖಾದ್ಯ ತೈಲ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು.
- ಫಾರ್ಚೂನ್ ಸೋಯಾಬೀನ್ ತೈಲ ಬೆಲೆಯನ್ನು ಪ್ರತಿ ಲೀಟರ್ ಗೆ ₹ 195 ರಿಂದ ₹ 165 ಕ್ಕೆ ಪರಿಷ್ಕರಿಸಲಾಗಿದೆ.
- ಸೂರ್ಯಕಾಂತಿ ಎಣ್ಣೆ ದರವನ್ನು ಪ್ರತಿ ಲೀಟರ್ ಗೆ ₹ 210 ರಿಂದ ₹ 199 ಕ್ಕೆ ಪರಿಷ್ಕರಿಸಲಾಗಿದೆ.
- ಸಾಸಿವೆ ಎಣ್ಣೆ ಎಂಆರ್ಪಿ (ಗರಿಷ್ಠ ಚಿಲ್ಲರೆ ಬೆಲೆ) ಅನ್ನು ಪ್ರತಿ ಲೀಟರ್ಗೆ ₹ 195 ರಿಂದ ₹ 190 ಕ್ಕೆ ಇಳಿಸಲಾಗಿದೆ.
- ಫಾರ್ಚೂನ್ ರೈಸ್ ಹೊಟ್ಟು ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ ಗೆ ₹ 225 ರಿಂದ ₹ 210 ಕ್ಕೆ ಪರಿಷ್ಕರಿಸಲಾಗಿದ್ದು, ನೆಲಗಡಲೆ ಎಣ್ಣೆಯ ಎಂಆರ್ಪಿಯನ್ನು ಪ್ರತಿ ಲೀಟರ್ ಗೆ ₹ 220 ರಿಂದ ₹ 210 ಕ್ಕೆ ಇಳಿಸಲಾಗಿದೆ.
- ರಾಗ ವನಸ್ಪತಿ ಬೆಲೆಯನ್ನು ಪ್ರತಿ ಲೀಟರ್ ಗೆ ₹ 200 ರಿಂದ ₹ 185 ಕ್ಕೆ ಮತ್ತು ರಾಗ ಪಾಮೋಲಿನ್ ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ ಗೆ ₹ 170 ರಿಂದ ₹ 144 ಕ್ಕೆ ಇಳಿಸಲಾಗಿದೆ.