ಬೆಂಗಳೂರು: ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ, ಬಾಂಬ್ ಇಟ್ಟಿರೋದಾಗಿ ಬೆದರಿಕೆ ಇ-ಮೇಲ್ ಬಂದಿತ್ತು. ಆ ಇ-ಮೇಲ್ ( E-Mail ) ಹುಚ್ಚ ವೆಂಕಟ್ ಹೆಸರಿನಲ್ಲಿ ಕಳುಹಿಸಲಾಗಿತ್ತು. ಈ ಹಿನ್ನಲೆಯಲ್ಲಿ ನನ್ನ ಹೆಸರು ಮಿಸ್ ಯೂಸ್ ಮಾಡಿಕೊಳ್ಳಬೇಡಿ ಎಂಬುದಾಗಿ ನಟ ಹುಟ್ಟ ವೆಂಕಟ್ ( Actor Huccha Venkat ) ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
BIG NEWS: ರಾಷ್ಟ್ರಪತಿ ಚುನಾವಣೆ: ವೀಲ್ ಚೇರ್ ನಲ್ಲಿ ಬಂದು ಮತಚಲಾಯಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಈ ಬಗ್ಗೆ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದು, ನನ್ನ ಹೆಸರು ಯಾರೋ ಮಿಸ್ ಯೂಸ್ ಮಾಡಿದ್ದಾರೆ. ದಯವಿಟ್ಟು ಯಾರೂ ನನ್ನ ಹೆಸರನ್ನು ಮಿಸ್ ಯೂಸ್ ಮಾಡಿಕೊಳ್ಳಬೇಡಿ. ನನ್ನ ಹೆಸರಲ್ಲಿ ಹೀಗೆ ಮೇಲ್ ಕಳುಹಿಸೋ ಕೆಲಸ ಮಾಡಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಅಂದಹಾಗೇ ಭಾನುವಾರ ಸಂಜೆ ಆರ್ ಆರ್ ನಗರದಲ್ಲಿರುವಂತ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ 3ನೇ ಯೂನಿಟ್ ಗೆ ಬೆದರಿಕೆ ಮೇಲ್ ಕಳುಹಿಸಲಾಗಿತ್ತು. ಇಂದು ಬೆಳಿಗ್ಗೆ ಶಾಲಾ ಸಿಬ್ಬಂದಿ ಮೇಲ್ ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಾಲೆಗೆ ಆಗಮಿಸಿದಂತ ಬಾಂಬ್ ನಿಷ್ಕ್ರೀಯ ದಳ, ಪರಿಶೀಲನೆ ನಡೆಸಿತ್ತು. ಈ ವೇಳೆ ಎಲ್ಲಿಯೂ ಬಾಂಬ್ ಪತ್ತೆಯಾಗದೇ ಇದ್ದರಿಂದ, ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿದು ಬಂದಿತ್ತು.