ಬೆಂಗಳೂರು: ಇಂದು ವಿಧಾನಸೌಧದಲ್ಲಿಯೂ ಕೇಸರಿ ಶಾಲು ( Kesari Shalu Controversy ) ವಿವಾದ ಕಂಡು ಬಂತು. ಕಾಂಗ್ರೆಸ್ ಶಾಸಕನಿಗೆ ( Congress MLA ) ಬಲವಂತವಾಗಿಯೇ ಬಿಜೆಪಿ ಶಾಸಕರು ( BJP MLA ) ಕೇಸರಿ ಶಾಲು ಹಾಕಿದ್ದು ಗಮನಸೆಳೆಯಿತು.
ಹೌದು.. ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಗೆ ವಿಧಾನಸೌಧದಲ್ಲಿ ಇಂದು ಶಾಸಕ ರಾಜುಗೌಡ ಅವರು ಕೇಸರಿ ಶಾಲು ಹಾಕಿದ್ರು. ಅವರ ನಂತ್ರ ತಮ್ಮ ಕೊರಳಿನಲ್ಲಿದ್ದಂತ ಕೇಸರಿ ಶಾಲು ತೆಗೆದು ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಹಾಕಿದ ಪ್ರಸಂಗ ನಡೆಯಿತು.
BIGG NEWS: ಶಿರಾಡಿ ಘಾಟ್ ಬಳಿಕ, ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತ
ಇನ್ನೂ ಶಾಸಕ ರಾಜುಗೌಡ, ಗೂಳಿಹಟ್ಟಿ ಶೇಖರ್ ಕೇಸರಿ ಶಾಲನ್ನು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಗೆ ಹಾಕಿದ್ರೇ, ಆ ಶಾಲು ಹಿಡಿದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಪೋಟೋಗೆ ಪೋಸ್ ಕೊಟ್ಟರು.
ಶಾಸಕ ಭೈರತಿ ಸುರೇಶ್ ಮಾತ್ರ ಹೇ ಬೇಡ ಬೇಡವೆಂದ್ರೂ ಬಲವಂತವಾಗಿಯೇ ಬಿಜೆಪಿ ಶಾಸಕ ರಾಜುಗೌಡ ಹಾಗೂ ಗೂಳಿಹಟ್ಟಿ ಶೇಖರ್ ಕೇಸರಿ ಶಾಲು ಹಾಕಿದ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.