ನವದೆಹಲಿ: ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧಂಕರ್ ಅವರು, ಜುಲೈ 18ರ ನಾಳೆ ಮಧ್ಯಾಹ್ನ 12 ಗಂಟೆಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಈ ಮೂಲಕ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕೆ ಅಧಿಕೃತವಾಗಿ ಇಳಿಯಲಿದ್ದಾರೆ.
BREAKING NEWS: ವಿಜಯವಾಡದಲ್ಲಿ ದೇಶದ 2ನೇ ಡೆಡ್ಲಿ ವೈರಸ್ ಮಂಕಿಪಾಕ್ಸ್ ಪ್ರಕರಣ ದೃಢ | Monkeypox
ನಿನ್ನೆ ಉಪರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸಂಸದೀಯ ಮಂಡಳಿಯ ಸಭೆಯ ಬಳಿಕ ಘೋಷಣೆ ಮಾಡಿದ್ದರು. ಉಪ ರಾಷ್ಟ್ರಪತಿ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕ, ಪಿಎಂ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರನ್ನು ಜನಗದೀಪ್ ಧಂಕರ್ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದರು.
ಇದೀಗ ಜಗದೀಪ್ ಧಂಕರ್ ಅವರು ನಾಳೆ ಉಪ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಅವರೊಂದಿಗೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿರಲಿದ್ದಾರೆ.
NDA Vice-Presidential candidate Jagdeep Dhankhar to file his nomination tomorrow (July 18) at 12pm
(File pic) pic.twitter.com/0egL9eXebh
— ANI (@ANI) July 17, 2022