ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದದೆ.
ಹಿಡಕಲ್ ಡ್ಯಾಂ ಗ್ರಾಮದ ಬಿಜೆಪಿ ಕಾರ್ಯಕರ್ತ ಪರಶುರಾಮ್ ಹಲಕರ್ಣಿ (32) ಕೊಲೆಯಾದ ವ್ಯಕ್ತಿ. ಮೃತ ಪರಶುರಾಮ್ ಹಲಕರ್ಣಿ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿನಾಗಿದ್ದನು. ಈತನನ್ನು ಗ್ರಾಮದ ಹನುಮಂತ ದೇವಸ್ಥಾನದ ಬಳಿ ಮೂವರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಆರೋಪಿಗಳಾದ ಮಂಜುನಾಥ ಪುಟಜನೆ ಕೆಂಪಣ್ಣ ನೆಸರಗಿ ಪೋಲಿಸರಿಗೆ ಶರಣಾಗಿದ್ದಾರೆ. ಮತ್ತೊಬ್ಬ ಆರೋಪಿ ಬಸವರಾಜ್ ಗಳಾತೆ ಪರಾರಿಯಾಗಿದ್ದಾನೆ. ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.