ಶಿವಮೊಗ್ಗ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯಲ್ಲಿ 2022-23ನೇ ಸಾಲಿನ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನಾವಿನ್ಯತೆ, ತಾರ್ಕಿಕ (ಗಣಿತ ವಿಷಯದಲ್ಲಿ 100% ಸಾಧನೆ), ಕಲೆ, ಸಾಂಸ್ಕøತಿಕ, ಸಮಾಜಸೇವೆ, ಸಂಗೀತ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲು ಅರ್ಹ ಮಕ್ಕಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಮಕ್ಕಳು ಯಾವ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಸಾಧಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಜಿಯಲ್ಲಿ ನಮೂದಿಸುವುದು. ರಾಷ್ಟ್ರ/ರಾಜ್ಯ/ಜಿಲ್ಲಾ ಮಟ್ಟದಲ್ಲಿ ಗುರುತಿಸಲಾಗಿರುವ ಸಾಧನೆಯನ್ನು ನಿಖರವಾಗಿರಬೇಕು. ಮಕ್ಕಳು 05 ವರ್ಷದಿಂದ 18 ವರ್ಷ ವಯೋಮಿತಿಯುಳ್ಳವರಾಗಿರಬೇಕು. ಮಗುವಿನ ಜನನ ಪ್ರಮಾಣ ಪತ್ರ ಮತ್ತು ಸಾಧಿಸಿರುವ ಪ್ರತಿಭೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ನೀಡುವುದು ಪತ್ರಿಕಾ ಪ್ರಕಟಣೆಯ ತುಣುಕು/ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿಗಳನ್ನು ಲಗತ್ತಿಸಬೇಕು.
ನಿಮ್ಮ ‘ನಿವೇಶ’ನ ಕೊಳ್ಳುವ ಆಸೆಗೆ ಇಲ್ಲಿದೆ ಅವಕಾಶ: ಇಲ್ಲಿ ‘ಕಡಿಮೆ ದರ’ದಲ್ಲಿ ‘ಸೈಟ್’ಗಳು ಲಭ್ಯ
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇವರಿಂದ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ದಿ: 26/08/2022 ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-250041 ನ್ನು ಸಂಪರ್ಕಿಸಬಹುದಾಗಿದೆ.
Watch Video: ಈ ‘ಪುಟ್ಟ ಬಾಲಕಿ’ಯ ನಡೆ ಕಂಡು ನೆರೆದಿದ್ದವರೇ ಭಾವುಕ, ನೀರೂರಿದ ಕಣ್ಣು.! ಯಾಕೆ ಅಂತ ಈ ಸುದ್ದಿ ಓದಿ.!